Nojoto: Largest Storytelling Platform

ನೀ ಬರುವ ಹಾದಿಯಲಿ ನಿತ್ಯ ನನ್ನದು ಹುಡುಕಾಟ ಒಂದು ಕ್ಷಣ ನೀ

ನೀ ಬರುವ ಹಾದಿಯಲಿ
ನಿತ್ಯ ನನ್ನದು ಹುಡುಕಾಟ
ಒಂದು ಕ್ಷಣ ನೀ ಕಾಣದಾದರೂ
ಅದೆನಗೇ ನೀಡುವುದು ಸಂಕಟ
ನೀನೆನ್ನ ನೋಡಿಯೂ ನೋಡದಂತೆ
ಹೋದರೂ ನನಗಿಲ್ಲ ಯಾವ ಚಿಂತೆ
ನಾ ನಿನ್ನ ನೋಡಿದರಷ್ಟೇ ಸಾಕು
ಮರೆವೆ ನನ್ನನ್ನೇ ನಾನಾರೆಂದು
ನನ್ನ ಮುಂದೆ ನೀ ನಡೆದು ಹೋಗಲು
ತುಸು ಸೋಕುವ ಸ್ಪರ್ಶವೇ ಮೇಲು
ಅದೆನ್ನ ತಣಿಸುವುದು 
ಇನ್ನೊಮ್ಮೆ ನೀ ಸಮೀಪಿಸುವವರೆಗೂ
ನನಗಿಂತಲೂ ಧನ್ಯ
 ನೀ ಮುಡಿದ ಮಲ್ಲಿಗೆ
ದಿನವೆಲ್ಲಾ ನಿನ್ನ ಮುಡಿಯೇರಿ
ಬಾಡುವುದು ಮೆಲ್ಲಮೆಲ್ಲಗೆ
ಕ್ಷಣವಾದರೂ ಆ ಹಿತ ನೀಡು
ಬದಲಾಗುವುದೆನ್ನ ಪಾಡು
ಬದುಕಿಗೆ ನೀ ಸಂಜೀವಿನಿ
ಒಲವಿಗೆ ನೀ ಅಮೃತವರ್ಷಿಣಿ
ಬಾ ಎದೆಯ ಭಾರವನಿಳಿಸು
ತಾ ಮನಕೆ ಸವಿಗನಸು
ಆಗಲೇ ಎಲ್ಲಾ ಸೊಗಸು
ಗೆದ್ದ ಪ್ರೀತಿಲಿ ವಿಜೃಂಭಿಸು

0827pm140715
ಅಪ್ಪಾಜಿ ಎ ಮುಸ್ಟೂರು ಸುಧಾ  #ಅಮುಭಾವದೂಟ 85

ನೀ ಬರುವ ಹಾದಿಯಲಿ
ನಿತ್ಯ ನನ್ನದು ಹುಡುಕಾಟ
ಒಂದು ಕ್ಷಣ ನೀ ಕಾಣದಾದರೂ
ಅದೆನಗೇ ನೀಡುವುದು ಸಂಕಟ

ನೀನೆನ್ನ ನೋಡಿಯೂ ನೋಡದಂತೆ
ನೀ ಬರುವ ಹಾದಿಯಲಿ
ನಿತ್ಯ ನನ್ನದು ಹುಡುಕಾಟ
ಒಂದು ಕ್ಷಣ ನೀ ಕಾಣದಾದರೂ
ಅದೆನಗೇ ನೀಡುವುದು ಸಂಕಟ
ನೀನೆನ್ನ ನೋಡಿಯೂ ನೋಡದಂತೆ
ಹೋದರೂ ನನಗಿಲ್ಲ ಯಾವ ಚಿಂತೆ
ನಾ ನಿನ್ನ ನೋಡಿದರಷ್ಟೇ ಸಾಕು
ಮರೆವೆ ನನ್ನನ್ನೇ ನಾನಾರೆಂದು
ನನ್ನ ಮುಂದೆ ನೀ ನಡೆದು ಹೋಗಲು
ತುಸು ಸೋಕುವ ಸ್ಪರ್ಶವೇ ಮೇಲು
ಅದೆನ್ನ ತಣಿಸುವುದು 
ಇನ್ನೊಮ್ಮೆ ನೀ ಸಮೀಪಿಸುವವರೆಗೂ
ನನಗಿಂತಲೂ ಧನ್ಯ
 ನೀ ಮುಡಿದ ಮಲ್ಲಿಗೆ
ದಿನವೆಲ್ಲಾ ನಿನ್ನ ಮುಡಿಯೇರಿ
ಬಾಡುವುದು ಮೆಲ್ಲಮೆಲ್ಲಗೆ
ಕ್ಷಣವಾದರೂ ಆ ಹಿತ ನೀಡು
ಬದಲಾಗುವುದೆನ್ನ ಪಾಡು
ಬದುಕಿಗೆ ನೀ ಸಂಜೀವಿನಿ
ಒಲವಿಗೆ ನೀ ಅಮೃತವರ್ಷಿಣಿ
ಬಾ ಎದೆಯ ಭಾರವನಿಳಿಸು
ತಾ ಮನಕೆ ಸವಿಗನಸು
ಆಗಲೇ ಎಲ್ಲಾ ಸೊಗಸು
ಗೆದ್ದ ಪ್ರೀತಿಲಿ ವಿಜೃಂಭಿಸು

0827pm140715
ಅಪ್ಪಾಜಿ ಎ ಮುಸ್ಟೂರು ಸುಧಾ  #ಅಮುಭಾವದೂಟ 85

ನೀ ಬರುವ ಹಾದಿಯಲಿ
ನಿತ್ಯ ನನ್ನದು ಹುಡುಕಾಟ
ಒಂದು ಕ್ಷಣ ನೀ ಕಾಣದಾದರೂ
ಅದೆನಗೇ ನೀಡುವುದು ಸಂಕಟ

ನೀನೆನ್ನ ನೋಡಿಯೂ ನೋಡದಂತೆ