ನೀ ಸ್ವಲ್ಪ ಅಳುಕಿದರೆ ಸಾಕು, ನಿನ್ನ ಬುಡವನ್ನೇ ಅಳ್ಳಾಡಿಸಿಬಿಡುವ ಜನರಿಹರಿಲ್ಲಿ. ಅಂಜದಿರು, ಅಳುಕದಿರು, ಎದೆಗುಂದದೆ ಮುನ್ನುಗ್ಗುತ್ತಿರು ಮನವೆ. ಕಷ್ಟ ಬರುವುದು ಮನುಷ್ಯರಿಗಷ್ಟೆ ಮರಕ್ಕಲ್ಲ. ಕಷ್ಟ ಬಂತೆಂದು ಕೊರಗಿ ಕೂರಬೇಡ, ಬಂದ ಕಷ್ಟವನ್ನು ಇಷ್ಟಪಟ್ಟು ಆಹ್ವಾನಿಸು, ಕಷ್ಟದ ಜೊತೆ ಅಳುಕದೆ ಹೊಂದಿಕೊಂಡು ಸಾಗು. ಮುಂದೊಂದು ದಿನ ಕಷ್ಟಕ್ಕೂ ಕೂಡ ನಿನಗೆ ಕಷ್ಟ ಕೊಡಲು ಮುಜುಗರವಾಗಿ ನಿನ್ನ ಜೀವನವು ಸುಖದ ಹಾದಿಯಲ್ಲೆ ಸಾಗುತ್ತದೆ. ನೋವು ಕಳೆಯುವುದು ಬೇಗನೆ. #ಮನವೇ #yqjogi #yqkannada #collab #collabwithjogi #YourQuoteAndMine Collaborating with YourQuote Jogi