ನಾ ಏನ ಕಲಿಸಲಿ ನಿನಗ ಒಳಿತು ಕೆಡುಕುಗಳ ಭೇದವೆಣಿಸದ ನಿರಾಕಾರ ನಿರ್ಲಿಪ್ತ ನಿರ್ಭವಾದ ಮುಗ್ಧ ಹೃದಯದ ಚೈತನ್ಯವಿರುವ ನಿನಗ ನಾ ಏನ ಕಲಿಸಲಿ.. ತಿಳಿದರೂ ಮತ್ತಷ್ಟೂ ತೀರದ ಬೆರಗುಗಣ್ಣಿನ ಪರಮ ಕುತೂಹಲಿ ನಿನಗ ನಾ ಏನ ಕಲಿಸಲಿ.... ನಿರುತ್ಸಾಹಿಯಾದ ನನ್ನ ಮನ ಪುಟಿಯುವ ನಿನ್ನ ಉತ್ಸಾಹವ ಕಂಡು ಕಲಿಯಬೇಕಿದೆ ನಿನ್ನಿಂದ.. ಅಂಬೆಗಾಲಿಗಾಗಿ ನಿನ್ನ ಅವಿರತ ಪ್ರಯತ್ನ...ಸೋತ ನನ್ನ ಮನಸ್ಸಿಗೆ ಸ್ಪೂರ್ತಿ ನಿನ್ನಿಂದ... ನಾ ಏನ ಕಲಿಸಲಿ ನಿನಗ ಎಲ್ಲವೂ ನಿನ್ನಿಂದ ನಾ ಕಲಿಯುತ್ತಿರುವಾಗ.... Spirit