ಉಸಿರ ತೆತ್ತು ಉಸಿರನಿತ್ತು ಉಸಿರಿರುವರೆಗೂ ಉಸಿರ ಕಾಯುವ ಉಸಿರದಾತೆಗೆ ಎನ್ನುಸಿರ ಖಾಯಂ ವಾರಸ್ದಾರಳಿಗೆ ಉಸಿರುಸಿರ ಏರಿಳಿತದಲ್ಲೂ ಉಸುರುವುದೊಂದೇ ಅಮ್ಮ ನಗುತಿರು ಎಂದೆಂದಿಗೂ... 😘 💞💞💞💞💞 Happy mother's day Maah! ❤💙 ಅದೆಷ್ಟೇ ನೋವುಗಳಿದ್ದರೂ ಸಹಿಸಿ.... ಅದೆಷ್ಟೇ ನಿಂದನೆಗಳು ಎದುರಾದರು ನಗುತಲಿ ಸ್ವೀಕರಿಸಿ.... ನಿಂದಿಸಿದ ನಿಂದಕರಿಗೂ ಒಳಿತನ್ನೇ ಬಯಸಿ.... ಮನದ ದುಗುಡವನ್ನೆಲ್ಲ ಬದಿಗಿರಿಸಿ.... ನಗು ನಗುತಲೆ ನೋವ ನುಂಗಿ ಜೀವನ ಸವೆಸಿದ ಜೀವಕೆ 😔 ಇನ್ನಾದರೂ ಶಾಶ್ವತ ನಗು ನೈಜತೆಯ ನಗು ಸಿಗುವಂತಾಗಲಿ... ಅರೋಗ್ಯದ ಸಂಪತ್ತು ಅಕ್ಷಯವಾಗಲಿ.... ನೆಮ್ಮದಿಯ ಕಣಜ ಸದಾ ಸಮೃದ್ಧವಾಗಿರಲಿ.... ❤