ಗಜಲ್.. ನನ್ನೆದೆಯ ಅಲಮಾರಿನಲ್ಲಿ ನಿನ್ನ ಸಿಹಿ ನೆನಪುಗಳ ಇಟ್ಟಾಕೆ ನೀನು.. ಅಲೆಮಾರಿ ನಾನೆಂದರೂ ಬಿಡದೆ ಹಿಡಿ ಪ್ರೀತಿ ಕೊಟ್ಟಾಕೆ ನೀನು.. ಹಕ್ಕಿಯಾಗಿದ್ದ ನಾನು ಪ್ರೇಮದಾಗಸದಿ ಹಾರಾಡಬಯಸಿದ್ದೆ ರೆಕ್ಕೆಗಳ ಮುರಿದು ಕನಸ ಕೆಡಿಸಿ ಮನಸ ಮರುಗಿಸಿದಾಕೆ ನೀನು.. ಚುಕ್ಕಿಗಳೆಲ್ಲ ನನ್ನ ಸಂಗಾತಿಗಳೆಂದು ಸದಾ ಸಂಭ್ರಮಿಸುತ್ತಿದ್ದೆ.. ಭ್ರಮೆಯ ಹರಿದು ಕರಾಳ ಕೂಪಕೆ ನನ್ನ ನೂಕಿದಾಕೆ ನೀನು.. ಪರಿಚಿತಳಲ್ಲದ ಪರಿಚಯಳಾಗಿ ನೀ ನನ್ನೊಂದಿಗೆ ನಕ್ಕು ಬೆರೆತಿದ್ದೆ.. ಏಕೋ ಒಲವ ದಾರಿಗೆ ಬೆಂಕಿಯಿಟ್ಟು ನೋಡದೆ ನೆಡೆದಾಕೆ ನೀನು.. ಎನೆಂದರೂ ನೀನು ಸುಂದರ ಸುಳ್ಳು ಕಳೆದು ಹೋದ ಸತ್ಯ.. ಲಕುಮಿಕಂದನ ಕಸವರ ಕಾವ್ಯದಲಿ ಅನವರತ ಉಳಿದಾಕೆ ನೀನು.. ✒ಲಕುಮಿಕಂದ ಮುಕುಂದ ©ಲಕುಮಿಕಂದ ಮುಕುಂದ.💞 #mytopoics #gajal #ಲಕುಮಿಕಂದ #ಗಜಲ್ #Karwachauth