Nojoto: Largest Storytelling Platform

ಹೆಂಡತಿಯರೇ" ........... ತಲೆನೋವು ". ಹೆಣ್ಣು ಉಡುವ

ಹೆಂಡತಿಯರೇ" ........... 
ತಲೆನೋವು ".


ಹೆಣ್ಣು ಉಡುವ  ಸೀರೆಗೆ 
ನೂರೆಂಟು ಸಾಲಿನ ವರ್ಣನೆ
ಗಂಡನ ಸೊಕ್ಕಿದ ಅಂಗಿಯ
 ಮೇಲಿನ ಆಪೂಸೂಟಿಗೆ 
 ಮೆಣಸಿನಕಾಯಿ ತಿಂದವಳ
 ಅನುಮಾನದ ಕಿರುನಗೆ 

ಎಂದಾದರೊಂದು ದಿನ 
ಆಫೀಸಿಗೋ, ಕಾರ್ಯಕ್ರಮಕ್ಕೊ
 ಚಂದದ ಉಡುಗೆ ತೊಟ್ಟು
 ಒಂದಿಷ್ಟು ಮೇಕಪ್ಪು ಮಾಡಿ 
ತಟ- ತಟನೆ ಹೊರಟರೆ  
 ಮೇಲಿಂದ ಕೇಳಗೆ ಒಮ್ಮೆ ಕಣ್ಣಾಡಿಸಿ  
ಹ್ಮೂ‌ಂ ಹ್ಮೂಂ
ಯಾವ ಸುಪನಾತಿಯ ಜೊತೆಗೊ 
ಇಂದಿನ ಸರಸ -ಸಲ್ಲಾಪ 

ಆಕೆ ಮಾಡುವ  ಅಡುಗೆಯಲಿ 
ತಲೆಗೂದಲು ಸಿಕ್ಕರೆ 
ಆಯಾತಪ್ಪಿ ಗಾಳಿಗೆ ಬಂದಿರಬಹುದು  
ಎನ್ನುವ ಸಮರ್ಥನೆ
ಗಂಡನ ಅಂಗಿಯ ಮೇಲೊಂದು 
ಉದ್ದನೆಯ ಕೂದಲು ಕಂಡರೆ 
ಅಂದಿನ ದಿನವೆಲ್ಲಾ ಗಂಡನಿಗೆ 
 ನಾದಸ್ವರಗಳ ಜೊತೆಗೆ  ಜಾಗರಣೆ

ಅವಳು ಮಾಡುವ ಖರ್ಚಿನ ಲೆಕ್ಕವಿಲ್ಲ ಹೇಳುವುದು ಮಾತ್ರ ಒಂದಿಷ್ಟು ಅಷ್ಟೇ
ನೀವು ಸೇದುವ ಬೀಡಿಗಿಷ್ಟು,ಎಣ್ಣೆಗಿಷ್ಟು ,ಪುಂಡಾಟಕಿಷ್ಟು 
ನೀವು ದುಡಿಯೋ ಹಣವೆಲ್ಲ ನಿಮ್ಮ ಸುತ್ತಾಟಕ್ಕೆ  ಎನ್ನುವಾ ಮಾರು ಉದ್ದದ ಬೈಗುಳ

ಹೆಂಡತಿಯ ಗೆಳತಿಯರು 
ಹಾಗಿಂದಾಗೆ ಮನೆಗೆ ಬರುತಿದ್ದರೆ 
ನಮಗೂ ಉಲ್ಲಾಸ 
.. ಆದರೆ ..
ನಮ್ಮ  ಗೆಳೆಯರು ಯಾವಾಗಲೋ 
ಒಮ್ಮೆ ಮನೆಕಡೆ ಬಂದರೆ ಮುಗಿತು 
ಸಿಡುಕು ಮೂತಿಯ ಚಲುವೆಯ ಮೊಗದಲ್ಲಿ ನವಶಕ್ತಿವೈಭವದ ರೌದ್ರತಾಂಡವ 
ಪಾತ್ರೆ ಎಲ್ಲವೂ ತಗ್ಗು
ಮಕ್ಕಳು-ಮರಿಗೆಲ್ಲವೂ  ಪೊರಕೆಯ ಪೂಜೆ 
 
ಗಂಡನ ಮೇಲಿನ ಸಿಟ್ಟಿಗೆ  
ಎಲ್ಲವೂ ಪುಡಿ ಪುಡಿ  
ಮದುವೆಯಾದ  ತಪ್ಪಿಗೆ ಎಲ್ಲದಕ್ಕೂ ನಾನೇ ಹೊಣೆ

©ವಿಶ್ವ (ಬ್ರಹ್ಮ)