White ಕನಸುಗಳ ಸುಟ್ಟ ದೇವರಿಗೆ ಹಿಡಿಶಾಪ ಹಾಕಲಾರೆ.! ಕೊಟ್ಟು ಕಿತ್ತುಕೊಂಡವನನ್ನು ಯಾವತ್ತೂ ದೂರಲಾರೆ. ಮನಸಲ್ಲಿ ಸಾವಿರ ಸ್ವಪ್ನ ಕಟ್ಟಿ ಮತ್ತೆ ನಗುವ ಚೆಲ್ಲುವೆ.. ನನಸಾಗದ ಕನಸುಗಳೊಟ್ಟಿಗೆ ಮತ್ತದೆ ನೆನಪ ಮೆಲ್ಲುವೆ.. ಯಾರದ್ದೂ ಬದುಕಿನಲಿ ನಾನು ಬೆಳಕಾಗುವ ಭ್ರಮೆಯಲ್ಲಿ.. ಬೆಂಕಿಯುಂಡು ಬೂದಿಯಾದೆ ಬಳಿದರು ಬೂದಿ ನಟನೆಯಲ್ಲಿ.. ಕಾಲಚಕ್ರದಡಿಗೆಲ್ಲ ತಿರುಗುವರು ಕರ್ಮದಂಚಿನ ಬದುಕಲ್ಲಿ ಶಾಶ್ವತ ನೆಲೆಯೆಲ್ಲುಂಟು?ಇಹದಿ ಧರ್ಮ ಮರೆತವರಿಹರಿಲ್ಲಿ.. ನಿತ್ಯ ನಟಿಸುವವರ ಮಧ್ಯದಲ್ಲಿ ಸತ್ಯವಂತರಿಗಿದು ಕಾಲವಲ್ಲ.. ಮುಸುಕು ಹೊತ್ತಾಡುವವರೆಲ್ಲ ಲಕುಮಿಕಂದನಿವನೆಲ್ಲವ ಬಲ್ಲ.. ©Lakumikanda Mukunda #Sad_Status #ಲಕುಮಿಕಂದ #lifelessons #lifequote