ಎಲ್ಲಿರುವೆಯೋ ಹೇಗಿರುವಿಯೋ ನಾ ಕಾಣೆ ನಿನ್ನ ಒಲವು ನನಗೆ ಸಿರಿಯು ನೀ ನನ್ನ ಕಣ್ಣ ಮುಂದೆ ಬರಬಾರದೇಕೆ... ಹೃದಯದರಮನೆಯಲ್ಲಿದೆ ನೂರಾರು ಬಯಕೆ ಹೇಳುವಾಸೆ ಈ ಮನಕೆ ನಿನ್ನರಸಿ ನಾ ನಡೆದ ಹಾದಿ ನಾನೇ ಕಾಣೆ ನೀ ಬಂದರೆ ಈ ಬಾಳಿಗೆ ಕಣ್ರೆಪ್ಪೆಯಂತೆ ಕಾಯ್ವೆ... ಅರಮನೆಯ ಸಿರಿತನ ನಿನಗಿಲ್ಲದಿದ್ದರೂ ನಾ ನಿನ್ನ ರಾಜನಂತೆ ಸ್ವೀಕರಿಸುವೆ ಪ್ರೇಮ ಸಿಂಚನವ ನೀ ಮಾಡಿದರೆ ಸಾಕೆನಗೆ ಬಾಳಿನ ಕೊನೆವರೆಗೂ ನಾ ರಾಣಿಯಾಗಿರುವೆ. ಕೃಷ್ಣಾಪ್ರಿಯ ಕೋಟೆಕ್ಕಾರ್✍️ ನಿಮ್ಮ ಮನದ ಮಾತನ್ನು ಕೇಳಿ, ಮನದ ನುಡಿಯನ್ನು ಬರೆಯಿರಿ. #ಮನದನುಡಿ #yqjogi #ykannada #collab #collabwithjogi #YourQuoteAndMine Collaborating with YourQuote Jogi