ಯುಗಾದಿ ಮಾವು ಬೇವು ಹೊಂಗೆ ಮರಗಳು ಹಳೆಯ ಕೊಳೆಯ ದೂರ ಸರಿಸುತ ಹೊಸತು ಚಿಗುರ ಕಂಪ ಸೂಸುತ ಹೂವ ಘಮಿಸುತ ಭೃಂಗದ ಸಂಗೀತವು ಸ್ವಾಗತಿಸುತ್ತಿವೆ ಯುಗದ ಆದಿಯನ್ನು ತೋರುತ್ತಿವೆ ಹೊಸ ಹಾದಿಯನ್ನು..... ಕಂಗೊಳಿಸಿದೆ ಮನೆಯ ತೋರಣ ಸವಿಯೋಣ ಬೆಲ್ಲದ ಹೂರಣ ಎಣ್ಣೆ ಸ್ನಾನದ ಅಭ್ಯಂಜನ ಯುಗಾದಿಯ ಚಂದ್ರ ದಶ೯ನ ನಮಿಸೋಣ ಗುರು ಹಿರಿಯರನ್ನ ಆಚರಿಸೋಣ ಯುಗಾದಿಯನ್ನ... ಬೇವು ಬೆಲ್ಲ ಹಂಚಿ ಸವಿದು ಕಷ್ಟ-ಸುಖದ ಬೆಲೆಯ ನೆನೆದು ದ್ವೇಷ ಭಾವದ ಮುಸುಕು ತೆರೆದು ತುಂಬು ಹೃದಯದಿ ಕೈಯ ಚಾಚಿ ಸ್ವಾಗತಿಸೋಣ ಯುಗಾದಿಯ ನಗುತ ಸಾಗುವ ಹೊಸ ಹಾದಿಯ.. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು. Ugadi