Nojoto: Largest Storytelling Platform

ನೀವ್ ನಿಜಕ್ಕೂ good ಅಪ್ಪ ಯಾಕಂದ್ರೆ ನಂಗ್ ನೀವ್ ಹೇಳಿದ್



ನೀವ್ ನಿಜಕ್ಕೂ good ಅಪ್ಪ ಯಾಕಂದ್ರೆ ನಂಗ್ ನೀವ್ ಹೇಳಿದ್ ಕೆಲವು ಕಥೆಗಳಲ್ಲಿ ನೀವ್ ನನ್ life-ಗೆನೇ ವಿಲನ್ ಆಗಿದ್ರೂ ನಡೆದದ್ದನ್ ಹೇಳಿದ್ರಿ. ಅದು ನಾ ಅಮ್ಮನ್ ಗರ್ಭದಲ್ ಇರ್ಬೇಕಾದ್ರೆ ಹೆಣ್ ಮಗು ಅಂತ ಊಹಿಸಿ ಮೊದಲೇ, "ನಮಗೆ ಹೆಣ್ ಮಗು ಬೇಡ ಈಗಿರೋ ಕಷ್ಟನೆ ಸಾಕು ಆ ಕಷ್ಟದಲ್ ಇವಳು ಭಾಗಿ ಆಗೋದು ಬೇಡ" ಅಂತಾನೇ ಭಾವಿಸಿ ನನ್ನನ್ನ ಬೇಡ ಅಂತ ತೆಗೆಸುವ ಯೋಚನೆಯಲ್ಲಿದ್ದಿರಿ ಅಂತ ಅನ್ಕೊಂಡಿದ್ದೀನಿ ಅಥವಾ ಇವಳೂ ಒಂದು ಕಷ್ಟ ಆಗ್ತಾಳೆ ಅಂತಾನೂ ಚಿಂತೆ ಮಾಡಿದ್ರೆನೊ! ಬಹುಶಃ... ಇರಬಹುದು. ನಿಮ್ಮ ಅಭಿಪ್ರಾಯ ಯಾವುದೇ ಇರಬಹುದು ನಾನೇನು ಅನ್ಯತಾ ಭಾವಿಸಲಾರೆ ಬಿಡಿ. ಏಕೆಂದರೆ ಅಂದೇ ನಾ ಅಳಿದಿದ್ದರೆ ಇಂದು ಅಳುವ ಎಷ್ಟೋ ಘಳಿಗೆಗಳಿಂದ ಸುಖಾಸುಮ್ಮನೆ ನಾನು ತಪ್ಪಿಸಿಕೊಳ್ಳುತ್ತಿದ್ದೆನಲ್ಲ! ಅಮ್ಮ ನಾ ಸಾಕ್ತೀನಿ ಅಂತ ಹೊತ್ತು ಹೆತ್ತು ನನ್ನ ಉಳಿಸಿಕೊಂಡರೂ ಭೂಮಿ ತಾಯ ಮಡಿಲಿಗೆ ಹಾಕಿ, ಬತ್ತಿದೆದೆ ಹಾಲಿಗೆ ನನ್ನ ನೆನಪೇ ಇಲ್ಲದೆ ಕೂತಾಗ ಆಳಲು ಸ ಶಕ್ತಿಯಿಲ್ಲದ ನನಗೆ ಸೆರ್ಲಾಕ್-ನಾ ತಂದು ತಿನ್ಸಿ ಉಳ್ಸಿ ಮತ್ತೊಮ್ಮೆ ನೀ ಅಮ್ಮನಾಗಿ ನಂಗೆ ಜನ್ಮ ನೀಡಿದೆ.

#ಅಪ್ಪ
ನಿರೀಕ್ಷಿಸಿ, ಮುಂದಿನ ದಿನಗಳಲ್ಲಿ ಪೂರ್ಣ ಬರಹದೊಂದಿಗೆ ಬರುತ್ತೇನೆ. ಸಮಯದ ಅಭಾವದಿಂದ ಈ ಮೊದಲೇ ಶುರು ಮಾಡಿದ್ದರೂ ಇನ್ನೂ ಪೂರ್ಣಗೊಂಡಿಲ್ಲ ಆದರೂ ಪೂರ್ಣಗೊಳಿಸುವ ಹಾದಿ ಹಿಡಿದು ಪ್ರಕಟಿಸುವ ಪ್ರಯತ್ನ ಮಾಡುವೆ.

©ಮಂಜಿನ ಬಿಂದು...
  #FathersDay  #ಮಂಜಿನ_ಬಿಂದು #ಮಂಜು_ತಾಟ್ಸ್  follow for more words....
manju2688167679824

...

New Creator

#FathersDay #ಮಂಜಿನ_ಬಿಂದು #ಮಂಜು_ತಾಟ್ಸ್ follow for more words.... #ಜೀವನ #ಅಪ್ಪ

358 Views