ಮರಳಿ ಬಂದಿದೆ ಹೊಸ ವರುಷವು ಅರಳಿಸಿದೆ ನವಭಾವಗಳ ಮನದಲಿ ಮರೆತು ಹೋದ ಭಾವಗಳ ಕೆಣಕಿದೆ ಮೊಗದಲಿ ತುಸು ನಗು ಮೂಡಿದೆ ತುಸು ಪ್ರೀತಿಗಾಗಿ ಬಡಿದಾಡಿದ ಮನ ಕೇಳಲಿಲ್ಲ ಹೇಳದೆ ಸುಮ್ಮನಿರಲಿಲ್ಲ ಅಲೆದಾಟದಿ ಕಳೆದು ಹೋದ ಕ್ಷಣ ಸಿಡುಕುತಿತ್ತು ಸುಳ್ಳಾದ ಒಲವ ಋಣ ಒಲವ ಮಾತು ಮನವ ಸುಟ್ಟಾಗ ಸುಮ್ಮನೆ ಇರಬಾರದಿತ್ತೇ ಕಾಲವೇ ಕಡುಕೋಪಿಗೂ ಸುಂದರ ಕನಸುಂಟು ನನ್ನವಳು ಅವಳೆಂಬ ಜಂಭವುಂಟು ಮರೆಯದ ಮನದಲಿ ಬಂದುದೆಲ್ಲ ಬರಲಿ ಬಾಳಲಿ ನಗುವು ತುಂಬಿರಲಿ ಅರೆಗಳಿಗೆ ಅಣಕಿಸಿದರೆ ಮರುಗಳಿಗೆ ಮರುಯಾತನೆ ಬೇಗುದಿ ತುಂಬಿದ ಬದುಕಲಿ ನವಭಾವ ಚಿಮ್ಮಲಿ... ಮರಳಿ ಬಂದಿದೆ ಹೊಸ ವರುಷವೂ... YQ ಕುಟುಂಬದ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು...💐💐💐💐 #yqnewyear2020 #yqnewyear #yqdvkrddots #yqjogi_kannada