Nojoto: Largest Storytelling Platform

ಏ ಕಂಬನಿಯೇ.. ನೀನೆಷ್ಟು ಸತ್ಯವೋ.. ನೀನಷ್ಟೇ ಮಿಥ್ಯೆ.! ಶಕ

ಏ ಕಂಬನಿಯೇ..
ನೀನೆಷ್ಟು ಸತ್ಯವೋ..
ನೀನಷ್ಟೇ ಮಿಥ್ಯೆ.!

ಶಕ್ತಿ, ಯುಕ್ತಿ, ಭಕ್ತಿಗಳಿಗೆ
ಸೋಲದ ಮನಗಳೂ..
ಕರಗಬಲ್ಲವು ಕಂಬನಿಗೆ.!
ಹಸಿ-ಹುಸಿ ಕಣ್ಣೀರಿಗೆ.!

ಯುಗಯುಗಳಿಂದಲೂ
ಜೀವಗಳು ಹೆದರುವುದೆ
ಭಾವಾನಾತ್ಮಕ ಬೆದರಿಕೆಗೆ.!
ಎದುರಿನವರ ನಯನಗಳಲಿ
ಸುರಿವ ಕಂಬನಿಧಾರೆಗೆ.!

ಒಲಿಯದವರ ಒಲಿಸಿ
ಬಲಿಷ್ಠರನೂ ಬಾಗಿಸಿ
ಎದುರಾಳಿಗಳನೂ..
ಮಣಿಸಿ ದಾರಿತಪ್ಪಿಸಲು
ನಿನಗಷ್ಟೇ ಸಾಧ್ಯ.!

ಓ ಕಂಬನಿಯೇ..
ನಲಿವಿಗೆ ಸಂಭ್ರಮಿಸುವ
ಆನಂದಭಾಷ್ಪವಾಗುವ,
ನೋವಿಗೆ ಸಂತೈಸುವ
ಅಶ್ರುಧಾರೆಯಾಗುವ ನೀ,
ವಂಚಿಸುವ ಕಪಟಿಯೂ
ಆಗಿರುವುದು ಮಾತ್ರ
ಈ ಲೋಕದ ದುರಂತ.!
 Tear
ಏ ಕಂಬನಿಯೇ..
ನೀನೆಷ್ಟು ಸತ್ಯವೋ..
ನೀನಷ್ಟೇ ಮಿಥ್ಯೆ.!

ಶಕ್ತಿ, ಯುಕ್ತಿ, ಭಕ್ತಿಗಳಿಗೆ
ಸೋಲದ ಮನಗಳೂ..
ಕರಗಬಲ್ಲವು ಕಂಬನಿಗೆ.!
ಹಸಿ-ಹುಸಿ ಕಣ್ಣೀರಿಗೆ.!

ಯುಗಯುಗಳಿಂದಲೂ
ಜೀವಗಳು ಹೆದರುವುದೆ
ಭಾವಾನಾತ್ಮಕ ಬೆದರಿಕೆಗೆ.!
ಎದುರಿನವರ ನಯನಗಳಲಿ
ಸುರಿವ ಕಂಬನಿಧಾರೆಗೆ.!

ಒಲಿಯದವರ ಒಲಿಸಿ
ಬಲಿಷ್ಠರನೂ ಬಾಗಿಸಿ
ಎದುರಾಳಿಗಳನೂ..
ಮಣಿಸಿ ದಾರಿತಪ್ಪಿಸಲು
ನಿನಗಷ್ಟೇ ಸಾಧ್ಯ.!

ಓ ಕಂಬನಿಯೇ..
ನಲಿವಿಗೆ ಸಂಭ್ರಮಿಸುವ
ಆನಂದಭಾಷ್ಪವಾಗುವ,
ನೋವಿಗೆ ಸಂತೈಸುವ
ಅಶ್ರುಧಾರೆಯಾಗುವ ನೀ,
ವಂಚಿಸುವ ಕಪಟಿಯೂ
ಆಗಿರುವುದು ಮಾತ್ರ
ಈ ಲೋಕದ ದುರಂತ.!
 Tear