ಶ್ರೀ ಗುರುಭ್ಯೋ ನಮಃ ತಾನು ತಿಳಿದು, ತಿಳಿಯ ಹೇಳುವ ತಾನು ಕಲಿತ ಜ್ಞಾನ ಕಲಿಸುವ ತಾನು ಬೆಳಗಿ ಬೆಳಕು ಚೆಲ್ಲುವ ಭವ್ಯ ಪ್ರಜೆಯ ತಪ್ಪು ತಿದ್ದುವ ಶುದ್ಧ ಸಿದ್ದಿಯ ಜೀವಕೆ..... ಅಂಧಕಾರದ ಮುಸುಕು ಸರಿಸಿ ವಕ್ರ ಚಿತ್ತದ ದೇಹವ ದಂಡಿಸಿ ತಪ್ಪು ತಿದ್ದುತ ಬುದ್ಧಿ ಬಿತ್ತುವ ಜ್ಞಾನ ಬೆಳಗುವ ದೀಪ ಬೆಳಗಿಸಿ ಜಗದ ಕೊಳೆಯ ದೂರಸರಿಸುವ ಜ್ಞಾನ ಯೋಗಿಗೆ ಕರವ ಜೋಡಿಸಿ ಶಿರವ ಬಾಗಿಸಿ ನಮಿಸುವೆನು.. ಶಿಕ್ಷಕರ ದಿನದ ಶುಭಾಶಯಗಳು Teachers day