Nojoto: Largest Storytelling Platform

ಲಾಕ್ ಡೌನ್ ಬರಹಗಳು- ದಿನ ೧೫ Lockdown Writings -Day 1

ಲಾಕ್ ಡೌನ್ ಬರಹಗಳು- ದಿನ ೧೫ 
Lockdown Writings -Day 15 ಬೆಳಗ್ಗಿನಿಂದ ಒಂದೇ ಸಮನೆ ಇದ್ದ ಉಪನ್ಯಾಸಗಳಿಂದ ಆತನ ತಲೆಕೆಟ್ಟಿತ್ತು. ಮಧ್ಯಾಹ್ನದ ಊಟಕ್ಕಾಗಿ ಹಾಸ್ಟಲ್ ಮೆಸ್ಸಿಗೆ ಬಂದ ಆತ ತಟ್ಟೆ ತುಂಬಾ ಬಡಿಸಿಕೊಂಡ. ತುತ್ತೊಂದ ಬಾಯಿಗಿಡುತ್ತಿದ್ದಂತೆಯೇ "ಥೂ! ಚೆನ್ನಾಗಿಲ್ಲಾ. ಅದೇನ್ ಅಡುಗೆ ಮಾಡ್ತಾರೋ,ತಿನ್ನೋ ಹಾಗೇನೇ ಇರಲ್ಲ!" ಎಂದು ಎಲ್ಲವನ್ನು ಚೆಲ್ಲಿ ಹೊರನಡೆದ. ಅಂದು ದೂರದಲ್ಲೆಲ್ಲೋ ಒಂದಗುಳು ಅನ್ನಕ್ಕೂ ಗತಿಯಿಲ್ಲದೆ ಹೊಟ್ಟೆ ತುಂಬಾ ನೀರ್ಕುಡಿದು ಅದೊಂದು ಕುಟುಂಬ ಮಲಗಿತ್ತು.
ಬಡಿಸಿಕೊಂಡು ಬಿಸುಡಿದ್ದ ಅನ್ನ, ಮೂಲ-ಅಂತ್ಯಕ್ಕೆ ಅಂಟಿಕೊಂಡಂತೆ ಮಣ್ಣು ಸೇರಿತ್ತು...

ರಚನೆ: ತೇಜಸ್ ಮೂರ್ತಿ.

#ಇರುವಿಕೆಇಲ್ಲದಿರುವಿಕೆ #ಮಿನಿಮನಮಿಡಿತ #ನ್ಯಾನೋಕತೆ  #paidstory #ಕನ್ನಡ #yqkannada #oldone #lockdowndiaries