Nojoto: Largest Storytelling Platform
yakshitha7149
  • 11Stories
  • 9Followers
  • 108Love
    0Views

Yakshitha

  • Popular
  • Latest
  • Video
0ac76fd82a0481565a7aa79b3e3ee7db

Yakshitha

White ಪ್ರೀತಿ ಮತ್ತು ಕಾಳಜಿ ನಮಗೆ ತೋರಿಸಿದಾಗ ನಾವು ಅನುಭವಿಸಿದ ಅನೇಕ ಭಾವನೆಗಳು ಪ್ರೀತಿ. ಇದು ಕೇವಲ ಪ್ರಣಯವಲ್ಲ. ಪ್ರೀತಿಯು ಅನೇಕ ವಿಷಯಗಳನ್ನು ಅರ್ಥೈಸಬಲ್ಲದು ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಪ್ರಾಮಾಣಿಕತೆ, ಕಾಳಜಿ ಮತ್ತು ವಿಶ್ವಾಸವು ಪ್ರೀತಿಯನ್ನು ರೂಪಿಸುತ್ತದೆ. ಪ್ರತಿಯೊಬ್ಬರೂ ಪ್ರೀತಿಸಬೇಕೆಂದು ಬಯಸುತ್ತಾರೆ. ಇದು ಅವರಿಗೆ ಸಂತೋಷವನ್ನು ನೀಡುತ್ತದೆ ಮತ್ತು ಅವರು ಮುಖ್ಯವೆಂದು ಭಾವಿಸುವಂತೆ ಮಾಡುತ್ತದೆ. ನಾವು ಅನೇಕ ವಿಷಯಗಳಿಗಾಗಿ ಪ್ರೀತಿಸುತ್ತೇವೆ ಮತ್ತು ನಾವು ಭಾವಿಸುವ ಪ್ರೀತಿ ನಮ್ಮ ಜೀವನದುದ್ದಕ್ಕೂ ಬದಲಾಗುತ್ತದೆ.

©Yakshitha #Sad_Status  ಪ್ರೀತಿ ಗಂಡ-ಹೆಂಡ್ತಿ ಪ್ರೀತಿ ಜಗಳ ಪ್ರೀತಿಯ ತುಣುಕು ಪ್ರೀತಿಯ ಕಾಣಿಕೆ

#Sad_Status ಪ್ರೀತಿ ಗಂಡ-ಹೆಂಡ್ತಿ ಪ್ರೀತಿ ಜಗಳ ಪ್ರೀತಿಯ ತುಣುಕು ಪ್ರೀತಿಯ ಕಾಣಿಕೆ

0ac76fd82a0481565a7aa79b3e3ee7db

Yakshitha

ನಿನಗೆ ಏನೂ ಆಗೊಲ್ಲ , ಹೇಳಿದ್ದು ಮಾಡಲ್ಲ . ಜೀವನ ನೀನು ಅಂದುಕೊಂಡಷ್ಟು ಸುಲಭವಲ್ಲ ..." 



ಹೀಗೆ ನೀನು ಮಾತು ಆಡುತ್ತಲೇ ಹೋದೆ . ನಿನ್ನ ಈ ಮಾತುಗಳು ಒಂದು ಸಾರಿ ಅಲ್ಲ ಈಗಾಗಲೇ ಹಲವು ಬಾರಿ ಹೇಳಿದ್ದೆ , ನಾನೂ ಕೇಳಿದ್ದೆ . 



ಸಮಯ ಒಂದೇ ತರಹ ಇರುವುದಿಲ್ಲ ಅಲ್ವಾ ? ಅವತ್ತು ನಿನ್ನ ಈ ಮಾತುಗಳು ನನಗೆ ಬಹಳವಾಗೇ ಮನಸ್ಸಿಗೆ ಚುಚ್ಚಿತ್ತು . 

ಸ್ವಾಭಿಮಾನದಿಂದ ಮನಸ್ಸು ಕುದ್ದಿತ್ತು . ಎರಡು ವರ್ಷದ ಸ್ನೇಹ, ಪ್ರೀತಿಯೂ ಬೇಡ ಅನ್ನಿಸಿದ್ದು ಆಗಲೇ ನೋಡು .  ನೀನು ನನಗೆ ಬರೀ ಗೆಳೆಯನಾಗಿರಲಿಲ್ಲ . ಗುರುವೂ ಆಗಿದ್ದೆ . ಪ್ರತೀ ಸಾರಿಯೂ ನಿನ್ನ ಪ್ರತಿಯೊಂದು ಮಾತಿಗೂ ನಾನು ಬೆಲೆ ಕೊಟ್ಟು ನೀ ಹೇಳಿದಂತೆ ಕೇಳಿದ್ದೆ . ಆತ್ಮ ವಿಶ್ವಾಸ ಬೆಳೆಸಿದವನು ನೀನು ಆದರೆ ನೀನೇ ಮತ್ತೆ ಮತ್ತೆ ಇಂಥ ಮಾತುಗಳು ಹೇಳಿದಾಗ ನಾನು ಸಹಿಸದಾದೆ.  ನಿನ್ನ ಬಳಿ ಇನ್ನು ಮಾತನಾಡಬಾರದು , ಯಾವಾಗ ನಾನು ನಿನ್ನ ಮಾರ್ಗದರ್ಶನ ಇಲ್ಲದೇ ಅಂದುಕೊಂಡದ್ದು ಸಾಧಿಸುವೆನೋ, ಆಗಲೇ ಮತ್ತೆ ನಿನ್ನ ಬಳಿ ಬರುವೆ ಎಂದು ನಿರ್ಧರಿಸಿದೆ. 



ಇಂದಿಗೆ ಐದು ದಿನವಾಯಿತು ನಿನ್ನ ಬಳಿ ಮಾತನಾಡಿ . ಮೊದಲೆಲ್ಲ ನಾವು ಎಷ್ಟೋ ಸಾರಿ ಜಗಳವಾಡಿದ್ದೆವು . ಆಗೆಲ್ಲ ನೀನು ಬಂದು ರಮಿಸಿ ಮುದ್ದು ಮಾತಾಡಿ , ನನಗಾಗಿ ದೊಡ್ಡ ರಸಿಕನಂತೆ ಹೊಸ ಕವಿತೆಗಳನ್ನು ಬರೆದು ಹೇಳುತ್ತಿದ್ದೆ . ಕವಿತೆಗಳಲ್ಲೇ ಬೇಡಿ ಮನಸು ಕರಗುವಂತೆ ಮಾಡುತ್ತಿದ್ದೆ.  ಆದರೆ ಇಂದು ನನ್ನ ಮನಸ್ಸು ಕಲ್ಲಾದಂತೆ ನಿನ್ನ ಮನಸ್ಸು ಕಲ್ಲಾಗಿರಬೇಕು .  ಅಥವಾ ನಾನು ನಿನಗೆ ಬೇಡವಾದೆನಾ ? 



ನಾನು ನಿನ್ನ ಎಷ್ಟು ಹಚ್ಚಿಕೊಂಡಿದ್ದೆ ಅಂತ ಈಗಲೇ ನನಗೆ ತಿಳಿದದ್ದು . ಪ್ರತೀ ದಿನ ಹತ್ತು ಸಾರಿ ನನ್ನ ಮೊಬೈಲ್ ಚೆಕ್ ಮಾಡುತ್ತೆನೆ . ಆದರೆ ನಿನ್ನ ಯಾವುದೇ ಮೆಸೇಜ್ ಬಂದಿರುವುದಿಲ್ಲ .  ಮುದ್ದು ನಾನು ನಿಜವಾಗಿ ಪೆದ್ದು ಕಣೋ.. ಅಂದು ನಿನ್ನ ಮೇಲಿನ ಕೋಪದಿಂದ ನಿನ್ನ ಯಾವುದೇ ಮೆಸೇಜ್ ಬರದಂತೆ ನಾನು ನನ್ನ ಮೊಬೈಲ್ನಲ್ಲಿ ನಿನ್ನ ಬ್ಲಾಕ್ ಮಾಡಿದ್ದೆ. ಅದೂ ಸಹ ಮರೆತು ಹೋಗಿದೆ.  ಆದರೆ ಆ ಬ್ಲಾಕ್ ತೆಗೆಯಲು ನನ್ನ ಸ್ವಾಭಿಮಾನ ಮತ್ತೆ ಅಡ್ಡ ಬರುತ್ತಿದೆ . ಆದರೂ ನಾನು ಏನು ಎಂದು ನಿನಗೆ ಚೆನ್ನಾಗಿ ಗೊತ್ತು. ನಿನ್ನ ಮಾತನಾಡದೇ ಐದು ದಿನ ಹೇಗೆ ಕಳೆದಿರಬಹುದು ಎಂಬ ಊಹೆ ನಿನಗೆ ಇರುತ್ತದೆ. 



ಇಲ್ಲ ಕಣೋ ನಾನು ಓದಿ ಬ್ಯಾಂಕ್ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ತೆಗೆದು ಕೆಲಸ ಗಿಟ್ಟಿಸಿದ ಮೇಲೆಯೇ ನಿನಗೆ ಮುಖ ತೋರಿಸುವೆ . ಒಂದು ದುರ್ಬಲ ಏನು ಗೊತ್ತ . ಎಷ್ಟು ಗಟ್ಟಿ ಮನಸ್ಸು ಮಾಡಿದರೂ ನಿನ್ನ ನೆನಪು ಮಾತ್ರ ಮನದಿಂದ ದೂರಾಗುತ್ತಿಲ್ಲ . ನಿನ್ನ ನೆನಪು ಬಂದಾಗ ಹುಚ್ಚಿಯಂತೆ ಒಬ್ಬಳೇ ಕೂತು ಅತ್ತು ಬಿಡುತ್ತೇನೆ. 

ಬೇಕಿಲ್ಲ ಈ ಕೋಪ . ಓಡಿ ನಿನ್ನ ಬಳಿ ಬಂದು ಬಿಡಲೇ ಅಂತ ನೂರು ಸಾರಿ ಅಂದುಕೊಳ್ಳುತ್ತೇನೆ . 

ಆದರೆ ಆಗ ನಿನ್ನ ಮಾತು ನಿಜವಾಗಿ ಬಿಡುತ್ತದೆ . ನಾನು ಏನೂ ಸಾಧಿಸುವುದಿಲ್ಲ. ನಾನು ಸೋತು ಹೋಗುತ್ತೇನೆ ಎಂದು ನೆನೆದಾಗ ಮತ್ತೆ ನನ್ನ ಸ್ವಾಭಿಮಾನ ಎಚ್ಚರ ಗೊಳ್ಳುತ್ತದೆ. 

ದಯವಿಟ್ಟು ನನ್ನ ನೆನಪಿನಿಂದ ದೂರ ಹೋಗಿಬಿಡು .  ನಿನ್ನ ದ್ವೇಷಿಸಲಂತೂ ಸಾಧ್ಯವಿಲ್ಲದ ಮಾತು. ಆದರೆ ಸ್ವಲ್ಪ ದಿನದ ಮಟ್ಟಿಗೆಯಾದರೂ ಈ ನರಕ ಯಾತನೆ ಅನುಭವಿಸಲೇ ಬೇಕಿದೆ. 

ನೀನು ನಾನು ಮತ್ತೆ ಸೇರುವ ಕಾಲ ಬರುವವರೆಗೂ ಈ ಡೈರಿನೇ ನನಗೆ ಗೆಳೆಯ.  ನಿನ್ನ ಎಷ್ಟು ಮಿಸ್ ಮಾಡಿಕೊಂಡೆ ಎಂದು ನೀನು ಇದನ್ನು ಓದಿದಾಗ ತಿಳಿಯುತ್ತದೆ. 

ಅಂದು ನಾನೇ ಓದಲು ಕೊಡುತ್ತೇನೆ. ಅದುವರೆಗೂ ನೀನು ಕಾಯಲೇಬೇಕು . ನಿನ್ನ ಬಳಿ ನನ್ನ ಒಂದೇ ಬೇಡಿಕೆ ಕಣೋ. ನಾನು ಬರುವವರೆಗೂ ನನಗಾಗಿ ಕಾಯುವೆಯಾ ?? 

ಅಥವಾ ಎಲ್ಲಾ ಹುಡುಗರಂತೆ ನನ್ನ ಮರೆತು ಬೇರೆ ಹುಡುಗಿಯ ಬಳಿ ಹೋಗುವೆಯಾ ?  ಹಾಗೇನಾದರೂ ಆದರೆ ನಿನ್ನ ಕೊಂದು ನಾನೂ ಸತ್ತು ಹೋಗುತ್ತೇನೆ ಕಣೋ ಇದು ನಿಜ .

©Yakshitha  ಪ್ರೀತಿಯ ತುಣುಕು ಪ್ರೀತಿ ಪ್ರೀತಿಯ ಕಾಣಿಕೆ ಮೋಸದ ಪ್ರೀತಿ ಅಮ್ಮನ ಪ್ರೀತಿ

ಪ್ರೀತಿಯ ತುಣುಕು ಪ್ರೀತಿ ಪ್ರೀತಿಯ ಕಾಣಿಕೆ ಮೋಸದ ಪ್ರೀತಿ ಅಮ್ಮನ ಪ್ರೀತಿ

0ac76fd82a0481565a7aa79b3e3ee7db

Yakshitha

White ನಾನ್ ಸ್ಟಾಪ್ ನವೆಂಬರ್ ಎಡಿಷನ್ - ಬಿಗಿನರ್



ನಗು ಮುಖದ ಮಗು ಚಂದ ಅಲ್ವಾ.

ವಿಜಯ ಮತ್ತೆ ವಿನೂತ ಮದುವೆಯಾಗಿ ಎಂಟು ವರ್ಷಗಳು ಕಳೆದಿದ್ದವು. ಆಸ್ತಿ ಇತ್ತು, ಹಣ ಇತ್ತು, ಮಕ್ಕಳ ಭಾಗ್ಯಾ ಮಾತ್ರಾ ದೇವರು ಕರುಣಿಸಿರಲಿಲ್ಲ. ವಿನೂತಾ ಮಾಡದ ಪೂಜೆ ಇರಲಿಲ್ಲ, ಹರಕೆ ಕಟ್ಟದ ದೇವರುಗಳಿಲ್ಲ.

ವಿಜಯ, ವಿನೂತಾ ತುಂಬಾ ಪ್ರೀತಿಸಿ ಮದುವೆಯಾದವರು. ಮಗುವಿನ ಬಗ್ಗೆ ವಿಜಯ ಅಷ್ಟಾಗಿ ಚಿಂತಿಸಿದವನಲ್ಲಾ. ನೀನೇ ಮ,ಗು ನಿನಗೇಕೆ ಮಗು ಬೇಕು ಅಂತಾ ಹೇಳುತ್ತಿದ್ದನು.  ಅವನಿಗೆ ಅದೊಂದು ವಿಷಯವೇ ಅಲ್ಲಾ. ವಿನೂತಾ ಎಷ್ಟೇ ಸಮಾಧನವಾದರೂ ಒಂದು ಕಡೆ ಮಗುವಿಗಾಗಿ ಹಂಬಲಿಸುತ್ತಿದ್ದಳು. ಹೀಗೆ 15 ವರ್ಷಗಳೇ ಕಳೆಯಿತು.

ಅದೊಂದು ದಿನ ಅವಳು ತಲೆ ಸುತ್ತು ಬಿದ್ದಳು.

ಅವಳ ಗಂಡ ಸಿಟ್ಟಿನಿಂದ ಮಗು ಮಗು ಅಂತಾ ಚಿಂತೆ ಮಾಡಿ ಸರಿಯಾಗಿ ಉಣ್ಣುವುದ ಮರೆತೆ. ನಿನ್ನಾ ದೇಹದಲ್ಲಿ ಏನು ಶಕ್ತಿ ಇದೆ ನೋಡು ಹೇಗಾಗಿದಿಯಾ ಅಂತಾ ಬಯ್ಯುತ್ತಾ ಹೊತ್ತುಕೊಂಡು ಹೋಗಿ ಮಲಗಿಸಿ ಮನೆಗೆ ಪರಿಮಳ ಡಾಕ್ಟರ ಕರೆಸಿದನು. ಅವಳನ್ನು ಪರೀಕ್ಷಿಶಿ ಅವಳು ತಾಯಿಯಾಗುತ್ತಿದ್ದಾಳು. ಇದೆಲ್ಲಾ ಮೊದಲು ಹೀಗಾಗತ್ತೆ ನೀವು ಇವರನ್ನಾ ಚನ್ನಾಗಿ ನೋಡಿಕೊಳ್ಳಬೇಕು ಅಂತಾ ಹೇಳಿದಾಗ ಅವರಿಬ್ಬರ ಮುಖದಲ್ಲಿ ಕಂಡ ಆ ಸಂತೋಷದ ನಗು ಎಂದು ಮರೆಯದ ನಗು.

©Yakshitha #Sad_Status
0ac76fd82a0481565a7aa79b3e3ee7db

Yakshitha

ಕನ್ನಡ
 

ಫೀಡ್	
ಲೈಬ್ರರಿ	
ಬರೆಯಿರಿ	
ಅಧಿಸೂಚನೆ	
ಪ್ರೊಫೈಲ್

Vijaya Bharathi

Romance Classics Thriller

4.7  
ಶ್ರಾವಣ ಸಂಜೆ
	3 mins 	309
Kannada Story : #795
Kannada Story Romance : #95
 ಕುಂಭದ್ರೋಣ   ರಾತ್ರಿ   ಶ್ರಾವಣ ಸಂಜೆ 



ಮಳೆಗಾಲದ ಆ ಸಂಜೆಯಲ್ಲಿ ಆಫೀಸ್ ನಿಂದ ಮನೆಗೆ ಹೊರಡುವ ಸಮಯಕ್ಕೆ ಸರಿಯಾಗಿ ಆಕಾಶ ದಲ್ಲಿ ದಟ್ಟವಾದ ಕಾರ್ಮೋಡಗಳು ಕವಿದು, ಇನ್ನೊಂದು ಅರೆಕ್ಷಣ ದಲ್ಲಿ ಜೋರಾಗಿ ಮಳೆ ಸುರಿಯಬಹುದೆಂಬ ಸೂಚನೆಯನ್ನು ನೀಡಿದಾಗ, ಸರಸರನೆ ಮನೆಗೆ ಹೊರಟ ಆರಭಿ,ಆಫೀಸಿನಿಂದ ಹೊರಗೆ ಬಂದು ತನ್ನ ಆಕ್ಟವ(activa)ಗಾಡಿಯತ್ತ ದೌಡಾಯಿಸಿದಳು. 'ಸಧ್ಯ,ಮಳೆ ಪ್ರಾರಂಭವಾಗುವ ಮೊದಲು ಮನೆ ಸೇರಿಬಿಡಬೇಕೆಂದು 'ಯೋಚಿಸುತ್ತಾ, ಗಾಡಿ ಸ್ಟಾರ್ಟ್ ಮಾಡಿ, ಆಕ್ಸಿಲರೇಟರ್ ಹೆಚ್ಚಿಸಿದಳು.ಒಂದೆರಡು ಕಿ.ಮೀ. ಸಾಗಿದೆ ನಂತರ ಟಪಟಪನೆ ಶುರುವಾದ ಮಳೆ ಜೋರಾದಾಗ, ವಿಧಿಯಿಲ್ಲದೆ ಒಂದು ಕಡೆ ನಿಂತಳು. ಮಳೆ ನಿಲ್ಲುವುದನ್ನೇ ಕಾಯುತ್ತಿದ್ದ ಅವಳಿಗೆ ನಿರಾಸೆ ಯಾಯಿತು.ಸುಮಾರು ಅರ್ಧ ಗಂಟೆ ಕಳೆದರೂ ,ಮಳೆ ಕಡಿಮೆ ಯಾಗುವ ಸೂಚನೆ ಕಾಣಲಿಲ್ಲ.ಜೊತೆಗೆ ಸುತ್ತಲೂ ಕತ್ತಲೆ ಆವರಿಸತೊಡಗಿತು.ಶ್ರಾವಣದ ಸಂಜೆಯ ಮಳೆ, ಜೋರಾಗುತ್ತದೆಯೇ ವಿನಾ ಕಡಿಮೆ ಯಾಗುವ ಸಂಭವ ಕಡಿಮೆ ಎಂದುಕೊಂಡ ಆರಭಿ,ಮಳೆ ಸ್ವಲ್ಪ ಕಡಿಮೆ ಯಾದಾಗ,ಜರ್ಕಿನ್ ಧರಿಸಿ ಗಾಡಿ ಸ್ಟಾರ್ಟ್ ಮಾಡಿದಳು.ಸುಮಾರು ಎಂಟು ಕಿ.ಮೀ.ದೂರವಿರುವ ಅವಳ ಮನೆ ಸೇರಲು ಕನಿಷ್ಠ ಅರ್ಧ ಗಂಟೆ ಯಾದರೂ ಬೇಕಾಗಿತ್ತು.ಹೀಗಾಗಿ ಮಳೆಯಲ್ಲೇ ಹೊರಟಳು. ನಿಧಾನವಾಗಿ ಗಾಡಿ ಓಡಿಸಿಕೊಂಡು, ಅಂತೂ ಇಂತೂ ಮನೆ ಸೇರುವ ವೇಳೆಗೆ ಅವಳಿಗೆ ಸಾಕಾಗಿ ಹೋಗಿತ್ತು.ಗಾಡಿ ನಿಲ್ಲಿಸಿ,ಮನೆಯ ಕೀ ತೆಗೆದು ,ಒಳಗೆ ಸೇರಿದಾಗ 'ಅಬ್ಬಾ,ಸುರಕ್ಷಿತ ವಾಗಿ ಮನೆ ಸೇರಿದನಲ್ಲ', ಎಂದು ಕೊಂಡು ನಿಟ್ಟುಸಿರು ಬಿಟ್ಟಳು.ಸುತ್ತಲೂ ಕತ್ತಲು ಇದ್ದುದರಿಂದ ಸ್ವಿಚ್ ಅದುಮಿದಳು.ಲೈಟ್ ಹತ್ತದಿದ್ದುದರಿಂದ, ಅವಳಿಗೆ ಕರೆಂಟ್ ಇಲ್ಲದಿರುವುದು ತಿಳಿಯಿತು.ಯು.ಪಿ.ಎಸ್.ಕಡೆ ಗಮನ ಹರಿದು, ಅದರ ಸ್ವಿಚ್ ಆನ್ ಮಾಡಲು ಅತ್ತ ಕಡೆ ನಡೆದಾಗ, ಯುಪಿ.ಎಸ್.ರಿಪೇರಿಗೆ ಹೋಗಿರುವುದು ನೆನಪಿಗೆ ಬಂತು.ಮನೆಯ ಹೊರಗಡೆ ಗುಡುಗು ಸಿಡಿಲು ಮಿಂಚು ಗಳಿಂದ ಕೂಡಿದ ಕುಂಭದ್ರೋಣ ಮಳೆ ,ಒಳಗಡೆ ಕರೆಂಟ್ ಇಲ್ಲದೆ ಕಗ್ಗತ್ತಲು.ಕಡೆಗೆ ಅವಳು ಕತ್ತಲಲ್ಲೇ ತಡಕಾಡಿ ಟಾರ್ಚಗಾಗಿ ಹುಡುಕಾಟ ನಡೆಸಿ, ಟಾರ್ಚ್ ತಂದು ಆನ್ ಮಾಡಿದಾಗ, ಅದೂ ಕೂಡ ಹತ್ತಲಿಲ್ಲ.ಬಹುಶಹ ಟಾರ್ಚ್ ನ ಶೆಲ್ ಗಳು ವೀಕ್ ಆಗಿರಬಹುದು.ಇತ್ತೀಚೆಗೆ ಯು.ಪಿ.ಎಸ್ ಮನೆಗೆ ಬಂದ ಮೇಲೆ ಟಾರ್ಚ್ ಅಥವಾ, ಮೋಂಬತ್ತಿ ಯ ಕಡೆ ಗಮನ ಕೊಟ್ಟಿರಲಿಲ್ಲ.ಹೀಗಾಗಿ ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ ಎಂದು ಕೊಂಡ ಆರಭಿ,ಮೊಬೈಲ್ ಬೆಳಕಿನ ಸಹಾಯದಿಂದ ಅಡುಗೆ ಮನೆಗೆ ಹೋಗಿ ಮೋಂಬತ್ತಿ ಗಾಗಿ ಹುಡುಕಾಡಿದಾಗ, ಕಡೆಗೂ ಒಂದು ಸಣ್ಣ ಮೋಂಬತ್ತಿ ಸಿಕ್ಕಿದಾಗ, ಅವಳಿಗೆ ನೀರಲ್ಲಿ ಮುಳುಗುತ್ತಿರುವವನಿಗೆ ಆಸರೆಯಾಗಿ ಹುಲ್ಲುಕಡ್ಡಿಸಿಕ್ಕಿದಂತಾಯಿತು.ಮೋಂಬತ್ತಿ ಹಚ್ಚಿ ಅಲ್ಲಿಯೇ ಇದ್ದ ಟೀಪಾಯಿ ಮೇಲೆ ಅದನ್ನು ನಿಲ್ಲಿಸಿ ,ಒದ್ದೆ ಬಟ್ಟೆ ಗಳನ್ನು ಬದಲಾಯಿಸಿ ಕೊಂಡು, ಒಂದು ಕಪ್ ಕಾಫಿ ಬೆರೆಸಿಕೊಂಡು ಉಸ್ಸಪ್ಪಾ ಎನ್ನುತ್ತಾ ಸೋಫಾದಲ್ಲಿ ಕುಳಿತಳು.

ಇದ್ದಕ್ಕಿದ್ದಂತೆ ಅವಳ ಗಮನ ಮನೆಯ ಬಾಗಿಲ ಕಡೆ ಹರಿದು, ಅನುಮಾನವಾಗಿ, ಕತ್ತಲಲ್ಲೇ ಹೆದರುತ್ತಾ ಬಾಗಿಲ ಹತ್ತಿರ ಹೋಗಿ, ಅದು ಲಾಕ್ ಆಗಿರುವುದನ್ನು ದೃಢ ಪಡಿಸಿಕೊಂಡು ಕುಳಿತಳು.ಮೋಂಬತ್ತಿ ಹಾಗೂ ಮೊಬೈಲ್ ನ ಬೆಳಕಿನ ಸಹಾಯದಿಂದ ಕಾಫಿ ಕುಡಿಯುತ್ತಿದ್ದಾಗ , ಅವಳಿಗೆ ಇಂದು ತನ್ನ ಗಂಡ ಅರುಣ್ ಕೆಲಸದ ಮೇಲೆ ಹೈದರಾಬಾದ್ ಗೆ ಹೋಗಿರುವುದು ನೆನಪಾಯಿತು."ಅಯ್ಯೋ, ಇಂದು ಅರುಣ್ ಬೇರೆ ಊರಲ್ಲಿಲ್ಲ,ಮಳೆಯ ಅಬ್ಬರ ಬೇರೆ, ಒಂದು ವೇಳೆ ಕರೆಂಟ್ ಬರದಿದ್ದರೆ?,"ಅರುಣ್ ಇರದ ಈ ರಾತ್ರಿ ಯನ್ನು ಕಲ್ಪಿಸಿಕೊಂಡು ಸಣ್ಣ ಗೆ ನಡುಗತೊಡಗಿದಳು.ಅವಳನ್ನು ಮೆಲ್ಲ ಮೆಲ್ಲನೆ ಭಯ ಆವರಿಸತೊಡಗಿತು.

ಹಾಗೇ ಕಣ್ಮುಚ್ಚಿ ಕುಳಿತಾಗ, ಅವಳಿಗೆ ಅರುಣ್ ನ ನೆನಪಾಯಿತು.ಅವನೊಂದಿಗಾದರೂ ಮಾತನಾಡುತ್ತಾ ಮನಸ್ಸನ್ನು ಹಗುರ ಮಾಡಿಕೊಳ್ಳಬೇಕೆನ್ನುತ್ತಾ, ಮೊಬೈಲ್ ಕೈಗೆತ್ತಿಕೊಂಡಾಗ,ಅದರ ಚಾರ್ಜ್ ಕಡಿಮೆಯಾಗಿದ್ದರಿಂದ ಆಫ್ ಆಗಿ ಹೋಯ್ತು. ಸಿಟ್ಟಿನಿಂದ ಅದನ್ನು ದೂರ ತಳ್ಳಿದಳು.ಕ್ಯಾಂಡಲ್ ಮೆಲ್ಲ ಮೆಲ್ಲನೆ ಕರೆಗುತ್ತಿತ್ತು.ಇನ್ನೂ ಕರೆಂಟ್ ಬಂದಿಲ್ಲ,ಮಳೆ ಸುರಿಯುತ್ತಲೇ ಇರುವುದನ್ನು ಇತ್ತು.ಒಂದು ವೇಳೆ ಕರೆಂಟ್ ಬರುವುದು ಇನ್ನೂ ತಡವಾದರೆ ಮುಂದೇನು? ಅವಳಿಗೆ ಯೋಚನೆ ಯಾಯಿತು.ಸೀದಾ   ದೇವರ ಕೋಣೆಗೆ ಹೋಗಿ ಎರಡು ಕಂಬಗಳಿಗೆ ಭರ್ತಿ ಎಣ್ಣೆ ತುಂಬಿಸಿ, ದೇವರ ದೀಪಗಳನ್ನು ಬೆಳಗಿಸಿ , ದೇವರಲ್ಲಿ "ಬೇಗ ಕರೆಂಟ್ಬರಲಪ್ಪ"ಎಂದುಮೊರೆಯಿಟ್ಟಳು.ಇಷ್ಟೆಲ್ಲಾ ಫಜೀತಿ ಗಳಲ್ಲಿ ಆರಭಿಗೆ ಹೊಟ್ಟೆ ಯ ಕಡೆ ಗಮನ ಹೋಗಿರಲಿಲ್ಲ.ಆದರೆ ಈಗ ಅವಳ ಹೊಟ್ಟೆ ಚುರುಗುಟ್ಟತೊಡಗಿದಾಗ,ಅಡುಗೆ ಮನೆಗೆ ಹೋಗಿಬಿಸ್ಕತ್ ಬ್ರೆಡ್ ಗಳನ್ನು ತಿಂದು, ನೀರು ಕುಡಿದುತನ್ನ ರೂಂ ಗೆ ಹೋಗಿ, ಮುಸುಕು ಬೀರಿ ಮಲಗಿದಳು.

ಅವಳ ಮನಸ್ಸು ದೇಹಗಳು ಅರುಣ್ ನನ್ನು ಬಯಸಿತ್ತು.ಮದುವೆಯಾಗಿ ಇನ್ನೂ ಆರು ತಿಂಗಳು ಕಳೆದಿದ್ದು,ಇದೇ ಮೊದಲ ಬಾರಿಗೆ ಅರುಣ್ ಕೆಲಸದ ಮೇಲೆ ಹೈದರಾಬಾದ್ ಗೆ ಹೋಗಿ ದ್ದ.ಸಹಜವಾಗಿ ಆರಭಿಗೆ ಗಂಡನ ನೆನಪಾಗಿ ,ಅವನ ನೆನಪುಗಳಲ್ಲಿ ಮುಳುಗಿ, ಕನಸಿನ ಲೋಕಕ್ಕೆ ಜಾರಿದಳು.

ಒಂದರ್ಧ ಗಂಟೆ ಕಳೆದಿರಬೇಕು,ನಿದ್ರೆಗೆ ಜಾರುತ್ತಿದ್ದ ಆರಭಿಗೆ ಬಾಗಿಲು "ಧಬ ಧಬ "ಬಡಿಯುವ ಶಬ್ದ ಕೇಳಿಸಿ, ಕನಸಿನ ಲೋಕದಿಂದ ವಾಸ್ತವ ಕ್ಕೆ ಬಂದು ಕಣ್ಣು ಬಿಟ್ಟಳು.ಇದು ಕನಸೋ ನನಸೋ ಎಂಬ ಅನುಮಾನದಲ್ಲಿ ಮೈಯ್ಯೆಲ್ಲಾ ಕಿವಿಯಾಗಿಸಿಕೊಂಡು

ಸುತ್ತಲೂ ಕಣ್ಣಾಡಿಸಿದಳು.ಕ್ಯಾಂಡಲ್ ದೀಪ ಆಫ್ ಆಗಿತ್ತು.ದೇವರ ಮನೆಯ ದೀಪ ಬೆಳಗುತ್ತಿತ್ತು ಹಾಳಾದ್ದು ಕರೆಂಟ್ಇನ್ನೂಬಂದಿರಲಿಲ್ಲ. ಕೆ.ಇ.ಬಿ.ಯವರಿಗೆ ಶಾಪ ಹಾಕಿ ದಳು.ಸ್ವಲ್ಪ ಸಮಯದ ನಂತರ ಮತ್ತೆ ಬಾಗಿಲು ಬಡಿಯುವ ಶಬ್ದ ಕೇಳಿದಾಗ, ಹೆದರಿಕೆಯಿಂದ ನಡುಗತೊಡಗಿದಳು.

ಯಾರೆಂದು ಕೇಳಲು ಬಾಯಿ ಬರುತ್ತಿಲ್ಲ,ನೋಡಲು ಧೈರ್ಯ ವಾಗುತ್ತಿಲ್ಲ.ಏನು‌ಮಾಡಬೇಕೆಂದು ತಿಳಿಯದೆಮತ್ತೆ ಹೊದ್ದಿಗೆ ಹೊದ್ದು ಮುಸುಕು ಬೀರಿ ಮಲಗಿದಳು. ಆದರೆ,‌ಬಾಗಿಲು ಬಡಿಯುವ ಶಬ್ದ ಕೇಳುತ್ತಲೇ ಇತ್ತು.ಎದ್ದು ಹೋಗಿ ನೋಡಲು ಭಯ, ಹಾಗೆ ಮಲಗೋಣವೆಂದರೆ ನಿದ್ರೆ ಬರುತ್ತಿಲ್ಲ.ಸ್ವಲ್ಪ ಹೊತ್ತು ಬಾಗಿಲು ಬಡಿಯುವ ಶಬ್ದ ನಿಂತಾಗ, ಅವಳಿಗೆ ಸಮಾಧಾನ ವಾಯಿತು.ಆದರೆ ಮಳೆಯ ಶಬ್ದ ನಿರಂತರವಾಗಿ ತ್ತು.ಇನ್ನೂ ಕರೆಂಟ್ ಬಂದಿಲ್ಲ.ಅವಳಿಗೆ ಚಿಂತೆ ಕಾಡಿತು.ಮತ್ತೆ ಬಾಗಿಲು ಬಡಿಯುವ ಶಬ್ದ ಕೇಳಿದಾಗ, ಕಿಟಕಿಯಲ್ಲಿ ಇಣುಕಿ ನೋಡಿದಳು.ಅವಳಿಗೆ ಯಾರೂ ಕಾಣಲಿಲ್ಲ.ದೇವರ ಕೋಣೆಗೆ ಹೋಗಿ ಮತ್ತಷ್ಟು ಎಣ್ಣೆ ತುಂಬಿಸಿ ದೀಪ ಆರದಂತೆ ಮಾಡಿದಳು.ತುಂಬಾ ಹೆದರಿ ಕೆಯಾಗಿ ಮುಸುಕೆಳೆದುಗಟ್ಟಿಯಾಗಿ ಕಣ್ಣು ಮುಚ್ಚಿ ಮಲಗಿದಳು.ಯಾರಾದರೂ ಇರಲಿ ಈ ಅವೇಳೆಯಲ್ಲಿ , ಕರೆಂಟ್ ಇಲ್ಲದೆ ಒಬ್ಬಳೇ ಇರುವಾಗ ಬಾಗಿಲು ತೆರೆಯುವುದು ಸರಿಯಿಲ್ಲ ವೆಂದು ಅವಳು ಗಟ್ಟಿಯಾಗಿ ನಿರ್ಧಾರ ಮಾಡಿ,ನಿದ್ರೆಗೆ ಜಾರಿದಳು.

ಹೊರಗಿನಿಂದ ಬಾಗಿಲು ಬಡಿದು ಬಡಿದು ಸಾಕಾಗಿ ಹೋಗಿದೆ ಅರುಣ್ ಹುಯ್ಯುವ ಮಳೆಯಲ್ಲೇ ಮನೆಯ ಮುಂದೆ ಯೇ ಬಾಗಿಲಿಗೆ ಒರಗಿ ನಿದ್ದೆ ಹೋದ.

ಅಂತೂ ಇಂತೂ ರಾತ್ರಿ ಕಳೆದು ಬೆಳಗಾಯಿತು. ನಿದ್ರೆ ಯಿಂದ ಎಚ್ಚರ ಗೊಂಡಾಗ,ಮಳೆನಿಂತಿರುವುದನ್ನು ಕಂಡು ಆರಭಿ ಸಮಾಧಾನದ ನಿಟ್ಟುಸಿರು ಬಿಟ್ಟು, ಹಾಸಿಗೆಯಿಂದ ಎದ್ದಳು.ರಂಗೋಲಿ ಹಾಕುವುದಕ್ಕೆ ಮನೆಯ ಮುಂಬಾಗಿಲನ್ನು ತೆಗೆದಾಗ,.ಹೊಸಿಲ ಬಳಿ ಕಾಲು ಚಾಚಿ ಮಲಗಿರುವ ಅರುಣ್ ನ ಕಂಡುಆಶ್ಚರ್ಯ ವಾಯಿತು.ಅಂದರೆ ರಾತ್ರಿ ಬಾಗಿಲು ಬಡಿದಿದ್ದು ಅರುಣ್ ಎಂದು ಗೊತ್ತಾದಾಗ, ಅವಳಿಗೆ ಪಶ್ಚಾತ್ತಾಪ ವಾಯಿತು.ಅವನನ್ನು ಮುಟ್ಟಿ ಎಬ್ಬಿಸಿ ಸಂಜೆ ಯಿಂದ ತಾನು ಮಳೆಯಿಂದ ತಾನು ತಲ್ಲಣಗೊಂಡಿದ್ದನ್ನು ಗಂಡನಿಗೆ ವಿವರಿಸಿ,"ಸಾರಿ" ಎಂದು ಕೇಳಿದರೆ,."ಹವಾಮಾನ ವೈಪರೀತ್ಯ ದಿಂದ ತನ್ನ ಫ್ಲೈಟ್ ಕ್ಯಾನ್ಸಲ್ ಆಗಿ,ಮಳೆಯ ಕಾರಣದಿಂದ ಮನೆಗೆ ಬರುವುದು ತಡವಾಯಿತು,ನೀನು ರಾತ್ರಿ ತೆಗೆದು ಕೊಂಡ ನಿರ್ಧಾರ ಸರಿಯಾಗಿಯೇ ಇದೆ "ಎಂದು ಹೇಳುತ್ತಾ ಹೆಂಡತಿ ಯನ್ನು ಸಮಾಧಾನ ಪಡಿಸುತ್ತಾ ಅರುಣ್ ಒಳಗೆ ಬಂದ. ಶ್ರಾವಣ ಸಂಜೆಯ ಕುಂಭದ್ರೋಣ ಮಳೆಯ ಈ ಅನುಭವ ಅವರಿಬ್ಬರ ಜೀವನದ ಮರೆಯಲಾಗದ ನೆನಪುಗಳಾದವು.

©Yakshitha love story horror story

love story horror story #ಪ್ರೀತಿ #795

0ac76fd82a0481565a7aa79b3e3ee7db

Yakshitha

White ಹುಟ್ಟಿನಿಂದಲೆ ನಾವು ರಕ್ತ ಸಂಬಂಧಗಳ ಜೊತೆ ಬೆಳೆಯುತ್ತೆವೆ. ಪ್ರೀತಿ ಕಾಳಜಿ ವಾತ್ಸಲ್ಯಗಳ ಮಧ್ಯೆ ಬೆಳೆಯುತ್ತೆವೆ. ಅದನ್ನು ಹೊರತು ಪಡಿಸಿ ನಾವು ನಮ್ಮ ಅನಿಸಿಕೆ ಅಭಿಪ್ರಾಯ ವ್ಯಕ್ತಪಡಿಸುವುದಾದರೆ ಅದು ಗೆಳತನ ಎನ್ನುವ ಕೊಂಡಿಯೊಂದಿಗೆ. ಯಾರು ಬಿಡಿಸಲಾಗದ ಕಬ್ಬಿಣದ ಕೊಂಡಿ ಅಂದ್ರು ತಪ್ಪಾಗಲಾರದು. ಗೆಳೆಯರಿಂದ ಸಿಗುವ ಒಗ್ಗಟ್ಟು ಕುಟುಂಬಗಳಲ್ಲಿ ಸಿಗಲು ಕೊಂಚ ಮಟ್ಟಿಗೆ ಕಡಿಮೆ ಇರಬಹುದು. ಅದೇನೋ ನಮಗೆ ಗೊತ್ತಿಲ್ಲದ ಹಾಗೆ ನಮ್ಮನ್ನು ಗೆಳೆತನ ಎಂಬ ಹೆಸರಲ್ಲಿ ಬೆಸೆಯುತ್ತೇವೆ. 



1ರಿಂದ 10ನೆ ತರಗತಿ ಮುಗಿಸಿದ ನಂತರ ಬೆಳೆದ ಗೆಳತನ ಇದು. ರಾಜು, ಮನು, ಹರೀಶ್, ಅನಿತಾ, ಅಶ್ವಿ,ನಿ ಅಮೃತಾ ಗೆಳೆಯರ ಒಂದು ಗುಂಪು ಸಿದ್ಧವಾಗತ್ತೆ ಆ ಗುಂಪಿನಲ್ಲಿ ಎಲ್ಲದಕ್ಕೂ ಮಾನ್ಯತೆ ಇರತ್ತೆ. ಇವರು ಲಾಸ್ಟ್ ಬೆಂಚಿನ ಗೆಳೆಯರು. ಒಂದು ಹುಡುಗಿ ಇಷ್ಟಾ ಆದ್ರೆ ಸಾಕು ಎಲ್ಲರೂ ಆತನಗೆ ಸಹಾಯ ಮಾಡಲು ಮುಗಿಬಿಳ್ಳುವುದು ಸಾಮಾನ್ಯವಾಗಿತ್ತು.ಇನ್ನೂಬ್ಬ ಗೆಳೆಯನ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಕೆಟ್ಟಾಗ ಅವನಿಗೆ ಸಹಾಯದ ಜೊತೆಗೆ ಸುಂದರ ಜೀವನ ರೂಪಿಸಲು ಏಷ್ಟಾಗತ್ತೊ ಅಷ್ಟು ಸಹಾಯ ಮಾಡುವುದು. ಒಬ್ಬರನ್ನು ಇನ್ನೊಬ್ಬರು ಅನುಕರಿಸುವುದು ಪ್ರಚೋದಿಸುವುದು, ತಮಾಷೆ ಮಾಡುವುದು ಎಲ್ಲವೂ ಇತ್ತು. ಇಂತಹ ಗೆಳತನ ಒಂದು ವಿಷಯಕ್ಕೆ ಜಗಳವಾಡಿ ಅವರ ಗೆಳತನ ಮುರಿದು ಬಿಳ್ಳುತ್ತೇ.



ಆ ಜಗಳದ ಹಿಂದೆ ಒಂದು ಪ್ರೀತಿಯ ಬೆಂಕಿ ಉರಿಯುವುದಕ್ಕೆ ಪ್ರಾರಂಭವಾಗಿರತ್ತೆ. ರಾಜು ಮತ್ತು ಮನುಗೆ ಅಮೃತಾ ನನಗೆ ಸೇರಿದವಳು, ನನಗೆ ಸೇರಿದವಳು ಎಂದು ಭಿನ್ನಾಭಿಪ್ರಾಯ ಇರುವುದನ್ನು ಅಶ್ವಿನಿ ನೋಡಿದ್ದಳು. ಅದನ್ನು ಮೊದಲೇ ಅಮೃತಳ ಜೊತೆ ಮಾತಾಡಿದ್ದಳು. ರಾಜು ಮತ್ತೆ ಮನು ಇಬ್ಬರು ಅಮೃತಳನ್ನ ಇಷ್ಟಾ ಪಟ್ಟಿರುತ್ತಾರೆ ಅದನ್ನೇ ಮಾತನಾಡುವುದಕ್ಕೆ ಅವಳ ಹತ್ತಿರ ಬಂದು ನಿಂತಾಗ ಅಮೃತ ಹೇಳಿದ ಮಾತುಗಳು ಹೀಗಿದ್ದವು. ಇಬ್ಬರು ಒಳ್ಳೆಯ ಸ್ನೇಹಿತರು ನೀವು. ಪ್ರೀತಿ ಅಂತ ಬಂದಾಗ ಅದನ್ನಾ ಒಬ್ಬರಿಗೆ ಮೀಸಲು ಇಡಲು ಸಾಧ್ಯ ಎಂದು ಅಮೃತ ಅವರಿಬ್ಬರಿಗೂ ತಿಳಿಸಿ ಹೇಳಿದಳು. ನಮ್ಮ ಈ ಸ್ನೇಹದ ಬಗ್ಗೆ ಗೌರವ ಇದೆ, ಈ ಪ್ರೀತಿ ಪ್ರೇಮದ ಹಿಂದೆ ಬೀಳುವುದು ಬೇಡಾ. ಓದೋಣ, ನಮ್ಮ ಸ್ವಂತ ದುಡಿಮೆಗೆ ಏನು ಬೇಕು ಎಂಬುದರ ಬಗ್ಗೆ ಅರಿಯೋಣ. ಈ ವಿಷಯವನ್ನು ಅಲ್ಲಿಗೆ ಬಿಟ್ಟು ಬಿಡೋಣ. ಮನು, ರಾಜು ನಾನು ಹೇಳುವುದು ನಿಮಗೆ ಅರ್ಥ ಆಗಿದೆ ಅಂತ ಅಂದುಕೊಳ್ಳುವೆ ಎಂದು ಹೇಳಿದಳು.



ರಾಜು ಮತ್ತೆ ಮನುಗೆ ಅವಳ ಮಾತು ನಿಜ ಅಂತ ಅನಿಸಿತು. ನೋಡಿ ನೀವು ನನ್ನ ಬೆಸ್ಟ್ ಪ್ರೇಡ್ಸ್ ನೀವು ಹೀಗೆ ಮಾಡುವುದು ಸರಿ ಅಲ್ಲಾ ಎಂದು ಅಮೃತ ಮತ್ತೆ ಭಾರವಾದ ಮನಸ್ಸಿನಿಂದ ಹೇಳಿದಳು. ರಾಜು ಮನು sorry ಕೇಳಿ ಮತ್ತೆ ಗೆಳತನವನ್ನು ಮುಂದುವರಿಸಿದರು. ರಾಜು,ಮನು, ಮತ್ತೆ ಅಮೃತಾ ಹೊಸದೊಂದು ಹೆಜ್ಜೆಗೆ ಮುಂದಾಗುತ್ತಾರೆ. ಅವರಲ್ಲಿ ಇದ್ದ ಭಿನ್ನಾಭಿಪ್ರಾಯವನ್ನು ತೆಗೆದೊಗೆದು ಒಳ್ಳೆಯ ಸ್ನೇಹಿತರಾಗಿ ಮುಂದೆ ಸಾಗುತ್ತಾರೆ. ನಿಜ ಅಲ್ವಾ ಸ್ನೇಹಿತರೇ ಸ್ನೇಹವೆ ಬೇರೆ, ಪ್ರೀತಿಯೇ ಬೇರೆ.

©Yakshitha #Sad_Status love status
0ac76fd82a0481565a7aa79b3e3ee7db

Yakshitha

White ಜಗತ್ತಿನಲ್ಲಿ ಎಲ್ಲ ಭಾಗದಲ್ಲೂ ದೇವರು ಬರಲಾಗುವುದಿಲ್ಲ ಅನ್ನುವ ವಿಚಾರಕ್ಕೆ ದೇವರು ತಾಯಿಯನ್ನು ಸೃಷ್ಟಿಸಿದ ಎನ್ನುವ ಮಾತು ನಾವು ನೀವೆಲ್ಲರೂ ಕೇಳಿದ್ದುಂಟು! ತಾಯಿಯು ತನ್ನ ಮಕ್ಕಳಿಗಾಗಿ‌ ಮಾಡಿದ ತ್ಯಾಗಕ್ಕೆ ಎಷ್ಟೇ ಜನ್ಮ ಅವಳ ಸೇವೆ ಮಾಡಿದರು ಅವಳ ಋಣ ತೀರಿಸಲು ಸಾಧ್ಯವಿಲ್ಲ!ಅಂತಹ ತಾಯಿಯ ಋಣ ತೀರಸಲು ಮುಂದಾದ ದಡ್ಡ ಮಗ ಹಾಗೂ ತಾಯಿಯ ನಡುವಿನ ಸಂಭಾಷಣೆ ನಿಮಗಾಗಿ.....



ಮಗ:ಅಮ್ಮ ನನಗಾಗಿ ನೀನು ಅದನ್ನ ಮಾಡಿದ್ದೀನಿ,ಇದನ್ನ ಮಾಡಿದ್ದೀನಿ‌ ಅನ್ನುವ ಮಾತುಗಳು ನನಗೆ ಸಹಿಸಲಾಗುತ್ತಿಲ್ಲ.ಎಷ್ಟು ದಿನಗಳವರೆಗೂ ಇದನ್ನೇ ಹೇಳ್ತೀಯಾ?ನನಗಾಗಿ ನೀನು‌ ಏನು ಮಾಡಿದ್ದೀಯ ಹೇಳಿ ಬಿಡು,ಇವತ್ತೇ ನಿನ್ನೆಲ್ಲ ಋಣ ತೀರಿಸಿಬಿಡುವೇ ನಿನ್ನ ಜೊತೆ ಇರುವ ಎಲ್ಲಾ ಕ್ಷಣಗಳು ಇದನ್ನೇ ಕೇಳುವುದಾಯ್ತು!

ತಾಯಿ:ನನ್ನ ಋಣ ತೀರಿಸುವೆಯಾ?

ಮಗ:ಹೌದು ಅದಕ್ಕಾಗಿ ನಾನು ಏನು ಮಾಡಬೇಕು ಹೇಳು.

ತಾಯಿ:ಇವತ್ತು ಒಂದು ದಿನ ನನ್ನ ಕೋಣೆಯಲ್ಲಿ ನನ್ನ ಪಕ್ಕ ಮಲಗು ನನ್ನೆಲ್ಲಾ ಋಣ ನೀನು ತೀರಿಸಿದಂತಾಗುತ್ತದೆ.

ಮಗ:ಇಷ್ಟು ಸುಲಭವೇ ನಿನ್ನ ಋಣ ತೀರಿಸುವುದು?

ಆಯ್ತು ಇವತ್ತಿನ ದಿನ ನಾನು ನಿನ್ನ ಕೋಣೆಯಲ್ಲಿ ಮಲಗುವೆ.

(ರಾತ್ರಿ ಆಗುತ್ತಿದ್ದಂತೆ ಮಗನನ್ನ ಕರೆದಳು ತಾಯಿ,ತಾಯಿ ಮಗ ಇಬ್ಬರು ಮಲಗಿದರು,ಮಗನಿಗೆ ನಿದ್ದೆ ಬರುತ್ತಿರುವ ಸಂದರ್ಭದಲ್ಲಿ ತಾಯಿ ಅವನನ್ನು ಎಚ್ಚರಿಸಿದಳು)

ತಾಯಿ:ಮಗ ನನಗೆ ತುಂಬಾ ಬಾಯಾರಿಕೆ ಆಗುತ್ತಿದೆ,ಸ್ವಲ್ಪ ನೀರು ತಂದು ಕೊಡು.

(ಮಗನಿಗೆ ನಿದ್ದೆಯಿಂದ ಎ‍ಚ್ಚರಿಸಿದ ಕೋಪ ಇದ್ದರು,ಸಮಾಧಾನದಿಂದ ಉತ್ತರಿಸಿದ.)

ಮಗ:ಆಯ್ತು ಅಮ್ಮ!ತಂದುಕೊಡುವೆ...

(ಮಗ ನೀರು ತಂದು ಕೊಡುತ್ತಿದ್ದಂತೆಯೇ ಸ್ವಲ್ಪ ನೀರು ಕುಡಿದು ಮಗನ ಹಾಸಿಗೆಯ ತುಂಬಾ ನೀರು ಹಾಕುತ್ತಾಳೆ)

ಮಗ:ಅಮ್ಮ ಇದೇನು ನಿನ್ನ‌ ಕೆಲಸ?ನೀನು‌ ನೀರು ಚೆಲ್ಲಿದರೇ ನಾನು ಹೇಗೆ ನಿದ್ರಿಸಲಿ ಈ ಹಾಸಿಗೆಯಲ್ಲಿ ???(ಕೋಪದಿಂದ)

ತಾಯಿ:ತಪ್ಪಾಯ್ತು ಮಗ,ವಯಸ್ಸಾಯ್ತು ಕೈಯಲ್ಲಿ ನೀರಿನ ಲೋಟ ಹಿಡಿಯುವ ಶಕ್ತಿಯು ನನ್ನಲ್ಲಿ ಇಲ್ಲ,ಹಾಗಾಗಿ ಕೈ ಜಾರಿತು,ಪರವಾಗಿಲ್ಲ ಏನು ಆಗಲ್ಲ ಅದರಲ್ಲೇ ಮಲಗು.

ಮಗ:ಏನು ಕರ್ಮ ನನ್ನದು!ಇದೇ ಗೋಳಿನ ಬದುಕು ನನ್ನದಾಯಿತು,ಯಾವಾಗ ಈ ಮುದುಕಿಯಿಂದ ನೆಮ್ಮದಿ ದೊರೆಯುವುದೋ ನನಗೆ!(ಅಮ್ಮ ಮೇಲಿನ ಕೋಪದಲ್ಲಿ ಗುಣುಗುತ್ತಾ)


(ಹೀಗೆ ಸ್ವಲ್ಪ ಹೊತ್ತಾದ ಮೇಲೆ ಮಗನಿಗೆ ನಿದ್ದೆ ಬರಲಾರಂಭಿಸಿತು. ಮತ್ತೆ ಮಗನನ್ನು ಎಚ್ಚರಿಸಿ ನೀರು ತಂದುಕೊಡಲು ಹೇಳಿದಳು,ಮಗ ಕೋಪದಿಂದ ಎದ್ದು ಮತ್ತದೆ ಗೊಣಗಾಟದಲ್ಲಿ ನೀರು ತಂದುಕೊಡುವನು.ತಾಯಿ ಮೊದಲಿನ ಹಾಗೆ ಸ್ವಲ್ಪ ನೀರು ಕುಡಿದು ಮಗನ ಹಾಸಿಗೆ ಮೇಲೆ ನೀರು ಹಾಕಿದಳು.)

ಮಗ:ಅಮ್ಮ ನಿನಗೆ ಬುದ್ದಿ ಇಲ್ಲವೇ,ನನ್ನ ಹಾಸಿಗೆ ನೀನು ಒದ್ದೆ ಮಾಡುತ್ತಲೇ ಹೋದರೆ ನಾನು ಹೇಗೆ ನಿದ್ರಿಸಲಿ,ಈ ನರಕ ನನಗೆ ಬೇಡ ನಾನು ನನ್ನ ಕೋಣೆಯಲ್ಲಿಯೇ ಮಲಗುವೆ,ನೀನು ಬೇಡ ನಿನ್ನ ಋಣವು ಬೇಡ!(ತಾಯಿ ಮಗನನ್ನ ಕರೆದು ಜೋರಾಗಿ ಹೊಡೆಯುವಳು.)ಯಾಕೆ ಹೊಡೆದೆ???(ಕೋಪದಲ್ಲಿ)

ತಾಯಿ:ಇವತ್ತು ನಿನ್ನ ಹಾಸಿಗೆ ನೀರಾಯಿತೆಂದು ನನ್ನ ಮೇಲೆ ಅಷ್ಟು ಕೋಪದಲ್ಲಿ ನೀನು ನನಗೆ ಮಾತನಾಡಿದೆ,ನೀನು ಚಿಕ್ಕವನಿದ್ದಾಗ ನನ್ನ ಪಕ್ಕದಲ್ಲಿ ನಿನ್ನ ಮಲಗಿಸಿಕೊಂಡಾಗ,ನೀನು ಮೂತ್ರ ಮಾಡಿದರೆ ಆ ಜಾಗದಲ್ಲಿ ನಾನು ಮಲಗಿ ನಿನ್ನ ಬೆಚ್ಚಗಿರಿಸುತ್ತಿದ್ದೆ.ಎಡಕ್ಕೆ ಮೂತ್ರ ಮಾಡಿದರೆ ನಿನ್ನ ನನ್ನ ಬಲಗಡೆ ಮಲಗಿಸಿ ನಿನ್ನ ಮೂತ್ರದಲ್ಲಿ ನಾನು ಮಲಗುತ್ತಿದ್ದೆ,ಒಂದುವೇಳೆ ನೀನು ಅಲ್ಲಿಯೂ ಮೂತ್ರ ಮಾಡಿದರೆ,ನನ್ನ ಎದೆಯ ಮೇಲೆ ಮಲಗಿಸಿಕೊಳ್ಳುತ್ತಿದ್ದೆ.ನಿನ್ನ ಹಾಸಿಗೆ ಬರಿ ನೀರಿನಿಂದ ಒದ್ದೆಯಾಗಿದೆ, ಆದರೆ ನಿನ್ನ ಹೊಲಸಿನಿಂದ ನನ್ನ ಹಾಸಿಗೆ ಒದ್ದೆ ಮಾಡಿದ್ದರೂ ನಾನು ನಿನ್ನ ಭಾರವೆಂದು ದೂರಲಿಲ್ಲ,ಆದರೆ ನೀನು ನನಗೆ ವಯಸ್ಸಾದ ಕಾರಣ ನನ್ನ ಬಗೆಗೆ ಅಗೌರವದ ನುಡಿಗಳಾನ್ನಾಡುವೆಯಾ??ಈ ಜಗತ್ತಿನಲ್ಲಿ ತಾಯಿಯ ಋಣ ಯಾವ ಮಗನಿಗೂ ತೀರಿಸಲು ಸಾಧ್ಯವಿಲ್ಲ ಅನ್ನುವುದನ್ನು ಅರಿತುಕೊಂಡು ಬದುಕು ಮಗ.!



(ಮಗನಿಗೆ ತಾನು ಮಾತನಾಡಿದ ನುಡಿಗಳು ತನಗೆ ನಾಚಿಕೆ ತರಿಸಿದವು,ತಾಯಿಯ ಕಾಲಿಗೆ ಬಿದ್ದು ಕ್ಷಮೆಯಾಚಿಸಿ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಂಡ!)

ನಮಗಾಗಿ ತನ್ನೆಲ್ಲಾ ಆಸೆಗಳನ್ನ ಬದಿಗೊತ್ತಿ ಕೇವಲ ಮಕ್ಕಳಿಗಾಗಿ ಬದುಕುವ ಜೀವ ತಾಯಿ!ಅಂತಹ ಜಗತ್ತಿನ ಎಲ್ಲಾ ತಾಯಂದಿರಿಗೆ ನನ್ನ ನಮನಗಳು,ಹಾಗೆ ತಾಯಿಯನ್ನು ನಾಯಿಯಂತೆ ನೋಡದಿರಿ,ತಾಯಿಯಿಲ್ಲದೆ ಜಗವೆಲ್ಲ ನಮ್ಮ ಜೊತೆಗಿದ್ದರೂ,ತಾಯಿಯೆಂಬ ಶ್ರೇಷ್ಠ ಚೈತನ್ಯ ಇಲ್ಲದ ಕೊರಗು ನರಕಕ್ಕಿಂತ ಕೀಳಾಗಿ ಇರುತ್ತದೆ!ತಾಯಿಯನ್ನು ‌ಗೌರವಿಸಿ.....

*ಭಾವನೆಗಳ ಬದುಕು ಸೋನು

(ವಿ.ಸೂ: ಒಬ್ಬ ವ್ಯಕ್ತಿಯ ಹಿಂದಿ ಭಾಷಣದ ಕನ್ನಡ ಅನುವಾದ

©Yakshitha #Sad_Status
0ac76fd82a0481565a7aa79b3e3ee7db

Yakshitha

White ಒಂದು ರಾತ್ರಿ ನಾನೂ ನನ್ನ ತಂದೆ ತಾಯಿ ಹಾಗೂ ತಂಗಿ ಮಲಗಿದ್ದಾಗ ಹೊರಗಡೆ ನಾಯಿಗಳೆಲ್ಲಾ ಗೂಳಿದುತ್ತಿದ್ದವು. ನಾನು ನನ್ನ ತಂಗಿ ಹಾಗೂ ನನ್ನ ತಾಯಿ ಒಂದೇ ಕೊಣೆಯಲ್ಲಿ ಮಲಗಿದ್ದೆವು. ಅಪ್ಪ ಪಕ್ಕದ ಕೋಣೆಯಲ್ಲಿ ಮಲಗಿದ್ದರು.ಅಂದು ರಾತ್ರಿ 12 ದಾಟಿತ್ತು. ನಾನು ಮಂಚದ ಮೇಲೆ ಒರಗಿದ್ದೆನೇ ಹೊರತು ಕಣ್ಣಿಗೆ ನಿದ್ದೆ ಆವರಿಸಿರಲ್ಲಿಲ್ಲ. ನಮ್ಮ ಮನೆಯ ಸುತ್ತ ಕ್ರಿಶ್ಚಿಯನ್ನರ ಮನೆಗಳಿದ್ದವು. ಎಲ್ಲರ ಮನೆಯಲ್ಲೂ ನಾಯಿ ಸಾಕಿದ್ದರು. ಆ ಎಲ್ಲಾ ನಾಯಿಗಳೂ ಗಟ್ಟಿಯಾಗಿ ಬೊಗಳಲು ಶುರುಮಾಡಿದವು. ನನಗೆ ಕರ್ಕಶವೆನಿಸಿದರೂ ಕಣ್ಣು ಮುಚ್ಚಿ ಸುಮ್ಮನೆ ಬಿದ್ದುಕೊಂಡೆ. ಆದರೆ ಅಮ್ಮ ಏಕೋ ಏನೋ ಶಾಂತವಾಗಿ ಎದ್ದರು. ಎದ್ದು ಸೀದಾ ಕಿಟಕಿಯ ಬಳಿ ಕಿಟಕಿಯ ಬಾಗಿಲು ತೆಗೆದು ಮೆತ್ತಗೆ ಇಣುಕಿದರು. ಅಂದು ಅಮ್ಮ ಸುಮ್ಮನೆ ನಾಯಿಗಳ ಬೊಗಳುವಿಕೆಯನ್ನು ಸಹಿಸಿಕೊಂಡು ಮಲಗಿರುತ್ತಿದ್ದರೆ ಅಂದು ಕಂಡ ನಿಗೂಢ ದೃಶ್ಯವನ್ನು ನಾವೆಲ್ಲರೂ ನೋಡಲಾಗುತ್ತಿರಲ್ಲಿಲ್ಲ. ಕಿಟಕಿಯ ಬಳಿ ಹೋದ ಅಮ್ಮ ಶಾಂತವಾಗಿ ಕಿಟಕಿಯಿಂದ ಇಣುಕಿ ಏನನ್ನೋ ನೋಡುತ್ತಲೇ ಇದ್ದರು. ನನಗೆ ವಿಚಿತ್ರವೆನಿಸಿದರೂ ಪುನಃ ಮಾತಾಡದೆ ಅಲ್ಲೇ ಬಿದ್ದುಕೊಂಡೆ. ಆದರೆ ಮರುಕ್ಷಣವೇ ಅಮ್ಮ ಮೆತ್ತಗೆ ನನ್ನನ್ನೂ ನನ್ನ ತಂಗಿಯನ್ನೂ ಕರೆದರು.

" ಚಿನ್ನು, ರಚ್ಚಿ ಇಲ್ಲಿ ಬನ್ನಿ. " ಅಮ್ಮ ಕರೆದಿದ್ದರು.

ಅಮ್ಮ ಕರೆದಾಗ ಹೊರಗಡೆ ಏನೋ ಕುತೂಹಲಕಾರಿಯಿದೆ ಎಂದೆನಿಸಿ ನಾವಿಬ್ಬರೂ ಕಿಟಕಿಯ ಬಳಿ ನಡೆದೆವು. ಆಗಲೇ ಕಂಡಿದ್ದು ನಾನು ಆ ನಿಗೂಢ ದೃಶ್ಯವನ್ನ!!!!!

         ನಮ್ಮ ಮನೆಯ ಎಡಭಾಗದಲ್ಲಿದ್ದ ಮನೆಯ ಗೇಟಿನ ಹೊರಗೆ ಇದ್ದ ಕಾಲುದಾರಿಯಲ್ಲಿ ಯಾವುದೋ ಒಂದು ಬೆಳಕು ಮೆತ್ತಗೆ ಗಾಳಿಯಲ್ಲಿ ತೇಲುತ್ತಾ ಹಾದು ಹೋಗುತ್ತಿತ್ತು. ವಿಚಿತ್ರ ಹಾಗೂ ಭಯನಕವೇನೆಂದರೆ ಆ ಬೆಳಕು ಕ್ಷಣಕ್ಕೊಮ್ಮೆ ಮನುಷ್ಯ ಆಕೃತಿಯಂತೆ ರೂಪುಗೊಳ್ಳುತ್ತಿತ್ತು ಹಾಗೂ ಅದು ಹಾದು ಹೋಗುವಾಗ ಗೆಜ್ಜೆ ಸದ್ದು ಕೇಳಿಸುತ್ತಿತ್ತು. ನನ್ನಮ್ಮ ನನ್ನಪ್ಪನನ್ನೂ ಪಕ್ಕದ ಕೋಣೆಗೆ ಹೋಗಿ ಎಬ್ಬಿಸಿ ಕರೆತಂದಿದ್ದರು. ಆ ಬೆಳಕು ಆ ಕಾಲುದಾರಿಯಲ್ಲಿ ಮೆತ್ತಗೆ ಹಾದು ಹೋಗುವಾಗ ಪಕ್ಕದ ಮನೆಯವರ ಎರಡು ನಾಯಿಗಳು ಗೇಟಿನ ತನಕ ಬಂದು ಗಟ್ಟಿಯಾಗಿ ಬೊಗಳುತ್ತಿದ್ದವು. ಅಪ್ಪ ಕೂಡ ಶಾಂತವಾಗಿ ಈ ದೃಶ್ಯವನ್ನು ಗಮನಿಸಿದರು. ನಾನಂತೂ ಜೀವಮಾನದಲ್ಲೇ ಇಂತಾ ದೃಶ್ಯವನ್ನು ನೋಡಿರಲಿಲ್ಲ. ಭಯವಾಗಿದ್ದರೂ ದೆವ್ವವೋ ಬೇರೇನೊ , ಆ ಆಕೃತಿ ದೂರದಲ್ಲಿದ್ದುದರಿಂದ ಏನೋ ಸುರಕ್ಷಿತ ಅನುಭವವಿತ್ತು. ಅಪ್ಪ ತುಸು ಕಾಲ ದೃಶ್ಯ ಗಮನಿಸಿ ಆ ಆಕೃತಿ ಅಲ್ಲಿಂದ ದೂರ ಹಾದು ಹೋದ ಮೇಲೆ " ಮಲಗಿಕೊಳ್ಳಿ , ಮಲಗಿಕೊಳ್ಳಿ. ಕಿಟಕಿಯ ಬಾಗಿಲೆಲ್ಲ ಮುಚ್ಚಿ ಸುಮ್ಮನೆ ಮಲಗಿಕೊಳ್ಳಿ " ಎಂದು ಹೇಳಿ ಪಕ್ಕದ ಕೊಣೆಗೆ ಮಲಗಲು ಮರಳಿದರು. ನಾವು ಅಮ್ಮನ ಬಳಿ ಅದೇನಿರಬಹುದು ಕೇಳಿದಾಗ ಅಮ್ಮ " ಸುಮ್ಮನೆ ಮಲಗಿಕೊಳ್ಳಿ " ಎಂದು ನಮ್ಮ ಬಾಯಿ ಮುಚ್ಚಿಸಿ ಮಲಗಿಕೊಂಡರು. ನಾನು ಅದೇನು ಎಂಬ ಕುತೂಹಲದಲ್ಲೇ ಭಯದಿಂದಲೇ ಕಂಬಳಿ ಹೊದ್ದುಕೊಂಡು ಮಲಗಿಕೊಂಡೆ.

   ಮರುದಿನ ನನ್ನ ಅಪ್ಪ ಅಮ್ಮ ಹಿಂದಿನ ರಾತ್ರಿಯ ಘಟನೆಯನ್ನು ಹೇಳುತ್ತಾ ತಮ್ಮೊಳಗೆ ಮಾತಾಡುತ್ತಿದ್ದರು. ನಾನು ಅವರ ಮಾತುಗಳನ್ನು ಕೇಳಿಸಿಕೊಂಡೆ.

" ಮಾರಿಗುಡಿಯ ದೇವಿ ಸವಾರಿ ಮಾಡುತ್ತಿದ್ದಳು. ನಿನ್ನ ತಮ್ಮಂದಿರಿಗೆ ರಾತ್ರಿ ತಡವಾಗಿ ಬರಬಾರದು ಎಂದು ಹೇಳು. ದೈವ ಸವಾರಿಗೆ ಎದುರಾದರೆ ಸುಮ್ಮನೆ ಅಪಾಯ ." ಎಂದು ಅಪ್ಪ ಹೇಳುತ್ತಿದ್ದರು.

" ಅದು ದೈವವೋ ಬೇರೆ ಏನೋ ಯಾರಿಗೆ ಗೊತ್ತು. " ಅಮ್ಮ ಮರುಮಾತಾಡಿದ್ದಳು.

  

     ನಮ್ಮ ಕಡೆ ದೈವಗಳು ರಾತ್ರಿ ಹೊತ್ತು ಸವಾರಿ ಮಾಡುತ್ತದೆ ಎಂಬ ನಂಬಿಕೆಯಿದೆ. ಅವುಗಳಿಗೆ ಅಡ್ಡ ಬಂದರೆ ಅಪಾಯಕಾರಿ ಸನ್ನಿವೇಶಗಳಾಗುವ ಬಗ್ಗೆ ನಾನು ನನ್ನ " ಆ ಕರಾಳ ಮಳೆ ರಾತ್ರಿ " ಬರಹದಲ್ಲಿ ಬರೆದಿದ್ದೇನೆ . ಹೀಗೆ ನಾವು ಅಂದು ಕಂಡ ಭಯಾನಕ ನಿಗೂಢ ದೃಶ್ಯ ದೇವಿಯ ಸವಾರಿಯಾಗಿತ್ತು ಎಂದು ತಂದೆ ಹೇಳಿದರು. ಆದರೆ ಅಂತಹ ಭಯಾನಕ ದೃಶ್ಯವನ್ನು ಕಣ್ಣಾರೆ ಕಂಡ ನನಗೆ ಇಂದಿಗೂ ಅದು ದೇವಿಯ ಸವಾರಿಯೆಂದು ಸಂಪೂರ್ಣ ನಂಬಿಕೆಯಿಲ್ಲ. ಆ ದೃಶ್ಯವೂ ಬಿಡಿಸಲಾಗದ ಒಗಟಾಗಿ ನನ್ನೊಳಗೆಯೇ ಉಳಿದುಕೊಂಡಿದೆ. ಆದರೆ ರಾತ್ರಿ ಹೊರಗೆ ಹೋಗಲು ಭಯವನ್ನು ಹೆಚ್ಚು ಮಾಡಿದೆ!!!

©Yakshitha #GoodMorning
0ac76fd82a0481565a7aa79b3e3ee7db

Yakshitha

White 
ಭಾರ್ಗವಿ ಎಸ್ಟೇಟ್



 


Feed
Library
Write
NotificationProfile



ಕಲ್ಪನಾ ಲೋಕದ ವಿಹಾರಿ

Horror Thriller Others

4.3  

ಭಾರ್ಗವಿ ಎಸ್ಟೇಟ್



5 mins

 



642

Kannada Story : #853Kannada Story Horror : #50

 ಎಸ್ಟೇಟ್   ಭಯಾನಕ ಕನಸು   ಭಾರ್ಗವಿ ಎಸ್ಟೇಟ್ 


ಮನಸ್ವಿ ಹೊರಟಿದ್ದೇ ತಡವಾಗಿ, ಅತ್ತೆ ಬೇಡ ಬೇಡ ಅಂದರೂ ಇಲ್ಲ ಮನೆಗೆ ಹೋಗಲೇಬೇಕು ಅಂತ ಹಠ ಹಿಡಿದು ಬಂದೇ ಬಿಟ್ಟಿದ್ದಳು. ರಜೆ ಕಳೆಯಲು ಅತ್ತೆ ಮನೆಗೆ ಹೋಗಿದ್ದ ಬೋಲ್ಡ್ ಹುಡುಗಿ ಮನಸ್ವಿ... ಆದರೆ ಏಕೋ ವಾಪಸ್ಸು ಬರಬೇಕು ಅಂತ ಅನಿಸಿ ಊರಿಗೆ ಹೊರಡಲು ಸಿದ್ಧ ಆಗಿದ್ದಳು... ಅತ್ತೆ ಅವರ ಊರಲ್ಲಿ ಬಸ್ ಹತ್ತಿದ್ರೆ ನಮ್ಮೂರಿನ ಗೇಟ್ ಹತ್ತಿರಕ್ಕೆ ಎರಡೇ ಗಂಟೆ. ಅಲ್ಲಿಂದ ಯಾರಾದರೂ ಒಬ್ಬರು ಸಿಕ್ತಾರೆ. ಅವರ ಜೊತೇಲಿ ಹೋದ್ರೆ ಹತ್ತು ನಿಮಿಷ ಊರಲ್ಲಿ ಇರ್ತೀನಿ ಅಂತೆಲ್ಲಾ ಲೆಕ್ಕಾಚಾರ ಹಾಕಿದ ಅವಳು, ಅವರ ಅತ್ತೆಗೆ ಭಯ ಪಡ್ಬೇಡಿ ಮನೆಗೆ ಹೋಗಿ ಫೋನ್ ಮಾಡ್ತೀನಿ ಅಂತ ಸಿದ್ಧವಾಗಿ ಬಸ್ ನಿಲ್ದಾಣಕ್ಕೆ ಬಂದೇ ಬಿಟ್ಟಳು... ಆದರೆ ಅವಳ ದುರಾದೃಷ್ಟವೋ ಏನೋ ದಾರಿಯಲ್ಲಿ ಬಸ್ ಕೆಟ್ಟು, ಅದು ಮತ್ತೆ ಸರಿಯಾಗಿ ಹೊರಡುವ ವೇಳೆಗೆ ಅರ್ಧಗಂಟೆಯಾಗಿತ್ತು...

ಬಸ್ ಅವರ ಊರಿನ ಗೇಟ್ ಬಳಿ ಬಂದು ನಿಂತಿತು..

ಮನಸ್ವಿ ಬಸ್ ಇಳಿದಳು. ಅದಾಗಲೇ ಸಂಜೆ ಆರೂವರೆ ಗಂಟೆ. ಊರಿಗೆ ಹೋಗೋರು ಯಾರಾದ್ರೂ ಬರ್ತಾರಾ ಅಂತ ಒಂದು ಹತ್ತು ನಿಮಿಷ ಕಾದು ನೋಡಿದಳು, ಆದರೆ ಯಾರೂ ಬರಲೇ ಇಲ್ಲ..... ಕಡೆ ಬಸ್ ಬೇರೆ ಅದು ಹೊರಟು ಹೋಯ್ತು...ಸಾಲದಕ್ಕೆ ಆವತ್ತೇ ಯಾರೂ ಓಡಾಡ್ತಿಲ್ಲ....ಫೋನ್ ತೆಗೆದಳು...‌ ಅದ್ರಲ್ಲಿ ನೋ ನೆಟವರ್ಕ್ ಆಗಿತ್ತು.... ಏನು ಮಾಡೋದು ತೋಚಲಿಲ್ಲ ಅವಳಿಗೆ , ಏನಾದ್ರೂ ಆಗ್ಲಿ ಧೈರ್ಯ ಮಾಡಿ ನಡ್ಕೊಂಡು ಹೋಗೋಣ.. ಹೇಗೂ ನಡೆದರೆ ಒಂದು ಅರ್ಧಗಂಟೆ ಅಷ್ಟೆ. ಅನ್ಕೊಂಡು ಮುಂದೆ ಹೆಜ್ಜೆ ಹಾಕಿದಳು...

ಆದರೆ ಮನಸ್ಸಲ್ಲಿ ಒಂದು ಭಯ, ಊರ ದಾರೀಲಿ ಹೋಗೋವಾಗ ದಾರಿಯ ಎಡಗಡೆ ಒಂದು ದೊಡ್ಡ ಎಸ್ಟೇಟ್ ಇದೆ. ಭಾರ್ಗವಿ ಎಸ್ಟೇಟ್. ಊರಲ್ಲಿ ಏನೇನೋ ಕಥೆ ಹೇಳ್ತಾರೆ. ಆ ಎಸ್ಟೇಟ್ ಮಾಲಿಕರ ಮಗಳು, ಭಾರ್ಗವಿ ಯಾವುದೋ ಕಾಯಿಲೆಯಿಂದ ಸತ್ತಳಂತೆ. ಅವಳು ಸತ್ತ ಮೇಲೆ ಅವರ ಮನೆಯವರೆಲ್ಲಾ ಬೇರೆ ಊರಿಗೆ ಹೊರಟೋದ್ರಂತೆ... ಆದರೆ ಮಾಲಿಕರ ಮಗಳಿಗೆ ಸತ್ಮೇಲೂ ಎಸ್ಟೇಟ್ ಮೇಲೆ ಪ್ರೀತಿ ಸಾಯದೆ, ಆ‌ ಎಸ್ಟೇಟ್ ಅಲ್ಲಿ ದೆವ್ವ ಆಗಿ‌ ಓಡಾಡ್ತಾ ಇದ್ದಾಳಂತೆ. ರಾತ್ರಿ ಹೊತ್ತು ಆ ದಾರಿಯಲ್ಲಿ ಊರಿಗೆ ನಡೆದು ಬರುವವರ ಕಣ್ಣಿಗೆ ಕಾಣಿಸಿಕೊಂಡು ತೊಂದರೆ ಕೊಡ್ತಾಳಂತೆ ಅಂತೆಲ್ಲಾ ಹೇಳಿದ್ದನ್ನು ಕೇಳಿದ್ಲು ಮನಸ್ವಿ....ಈಗ ಅದೆಲ್ಲಾ ಬೇಡ ಅಂದರೂ ನೆನಪಾಗ್ತಾ ಇತ್ತು ಅವಳಿಗೆ....

ಮನಸ್ಸಲ್ಲಿ ಭಯ ಇದ್ರು, ಮನೆಗೆ ಹೋಗ್ಬೇಕು ಅನ್ನೋದು ಮೈಂಡ್ ಅಲ್ಲಿ ಇದ್ದಿದ್ರಿಂದ ನಡ್ಕೋಂಡು ಹೋಗ್ತಾ ಇದ್ಲು...ಒಂದು ಹತ್ತು ನಿಮಿಷ ಆಗಿತ್ತು. ಭಾರ್ಗವಿ ಎಸ್ಟೇಟ್ ಗೇಟ್ ಇನ್ನೇನು ಇನ್ನೊಂದು ಸ್ವಲ್ಪ ದೂರದಲ್ಲಿ ಇತ್ತು...ಮನಸ್ವಿ ಎದೆ ಬಡಿತ ಜಾಸ್ತಿ ಆಯಿತು....ಬೇಗ ಬೇಗ ಓಡಿ ಬಿಡೋಣ ಅನ್ಕೊಂಡು ಹೆಜ್ಜೆ ಎತ್ತಿ ಓಡೋಕೆ ಹೋದಳು, ಆದರೆ ಕಲ್ಲೊಂದನ್ನು ಎಡವಿ ಆಯತಪ್ಪಿ ಬಿದ್ದಳು... ಓಡೋ ಮಾತು ಅಲ್ಲಿಂದ ಓಡಿ ಹೋಯ್ತು...ನಿಧಾನವಾಗಿ ಹೆಜ್ಜೆ ಇಡ್ತಾ ಬರ್ತಾ ಇದ್ಲು.... ಎಡಗಡೆ ಭಾರ್ಗವಿ ಎಸ್ಟೇಟ್ ನ ಮೈನ್ ಗೇಟ್ ಮೇಲೆ ಇದ್ದ ಫಲಕ ಗಾಳಿಗೆ ಅಲ್ಲಾಡೋಕೆ ಆರಂಭ ಆಯ್ತು......

ಸುತ್ತ ಕತ್ತಲು ಆಗ್ತಾ ಬರ್ತಿತ್ತು. ಆ ಗೇಟ್ ಹತ್ತಿರ ಬಂದ ಮೇಲೆ ಪೂರ್ತಿ ಕತ್ತಲು ಆಗೋಯ್ತು... ಆದರೆ ಗೇಟ್ ಹತ್ತಿರ ಇದ್ದ ಒಂದು ಲೈಟ್ ಉರಿತಾ ಇತ್ತು.... ನಿಶ್ಯಬ್ದ ವಾತಾವರಣ ಬೀಸೋ ಗಾಳಿ ಹಾಗೂ ಗೇಟ್ ಮೇಲೆ ಇದ್ದ ಆ ಭಾರ್ಗವಿ ಎಸ್ಟೇಟ್ ಅನ್ನೋ ಬೋರ್ಡ್ ಅಲ್ಲಾಡೋ ಶಬ್ದ ಬಿಟ್ಟರೆ ಬೇರೆ ಶಬ್ದ ಇಲ್ಲ.... ಮನಸ್ವಿ ನಿಧಾನವಾಗಿ ಬರ್ತಾ, ಈಗ ರಸ್ತೆಯಲ್ಲಿ ಕರೆಕ್ಟಾಗಿ ಆ ಗೇಟ್ ಮುಂದೆ ಇದ್ದಳು.... ಮುಂದೆ ನಡೆಯೋಕೆ ಅವಳು ಮಾಮೂಲಿಯಾಗಿ ಹೆಜ್ಜೆ ಎತ್ತಿಡೋಕೆ ಕಾಲು ಎತ್ತಿದಳು. ಆದರೆ ಅವಳ ಕಾಲು ಕದಲಲಿಲ್ಲ.... ಯಾರೋ ಅವಳ ಕಾಲನ್ನು ಬಲವಾಗಿ ಹಿಡಿದ ಹಾಗಿತ್ತು...

ಈಗ ಗೇಟ್ ಮೇಲೆ ಇದ್ದ ಬೋರ್ಡ್ ಇನ್ನೂ ಜೋರಾಗಿ ಆಡೋಕೆ ಪ್ರಾರಂಭ ಆಯ್ತು... ಅದು ಮಾಡ್ತಿದ್ದ ಶಬ್ದ ಮೊದಲಿಗಿಂತ ಜಾಸ್ತಿ ಆಯ್ತು....ಸಾಲದಕ್ಕೆ ಅಲ್ಲಿದ್ದ ಲೈಟ್ ಕೂಡಾ ಆನ್ ಆಫ್ ಆಗ್ತಾ ಆಟ ಆಡೋಕೆ ಶುರುವಾಯ್ತು.. ಮನಸ್ವಿಗೆ ಕಾಲು ಎತ್ತಿಡೋಕೆ ಆಗ್ತಾ ಇಲ್ಲ..... ತನ್ನ ಕಾಲು ಯಾಕೆ ಕದಲ್ತಾ ಇಲ್ಲಾ ಅಂತ ಭಯ ಆಯ್ತು...

ಭಯದಿಂದ ಆ ಗೇಟ್ ಮೇಲಿರೋ ಬೋರ್ಡ್ ಅಲ್ಲಾಡೋದನ್ನು ನೋಡ್ತಾ ಇದ್ಲು.... ಆಗ ಎಸ್ಟೇಟ್ ಒಳಗಿಂದ ರಭಸವಾಗಿ ಬೀಸಿ ಬಂತು ಗಾಳಿ... ಆ ಗಾಳಿ ವೇಗಕ್ಕೆ ಗೇಟ್ ದೊಡ್ಡ ಶಬ್ದ ಮಾಡ್ಕೋಂಡು ತೆರೆದುಕೊಳ್ತು..... ಮನಸ್ವಿಗೆ ಸಿಕ್ಕಾಪಟ್ಟೆ ಭಯ ಆಯ್ತು... ಓಡೋಕು ಆಗದ ಹಾಗೆ ಅವಳ ಕಾಲು ನೆಲಕ್ಕೆ ಅಂಟಿಕೊಂಡಿತ್ತು.... ಅವಳು ಭಯದಲ್ಲಿ ಇರ ಬೇಕಾದ್ರೆ ಅವಳ ಫೋನ್ ರಿಂಗ್ ಆಯ್ತು.... ಆ ಕ್ಷಣದಲ್ಲಿ ಆ ಶಬ್ದ ಕೂಡಾ ಭಯ ಹುಟ್ಟಿಸಿತ್ತು... ಕಾಲು ಕದಲ್ತಿಲ್ಲ.... ಹೋಗಲಿ ಫೋನ್ ನೋಡೋಣ ಅಂತ ಅವಳ ಕೈಯಿಂದ ಪರ್ಸ್ ತೆಗೆಯೋಕೆ ಪ್ರಯತ್ನ ಮಾಡೋ ವೇಳೆಗೆ ಅವಳ ಕೈ ಕೂಡ ಕದಲದೆ ಆಯ್ತು...

ಮನಸ್ವಿಗೆ ಏನಾಗ್ತಾ ಇದೆ ಅಂತ ಅರ್ಥ ಆಗ್ಲಿಲ್ಲ...‌ಕೈಕಾಲು ಎರಡು ಬಿಗಿದು ಹೋಗಿದ್ದವು. ಆಗ ಮತ್ತೆ ಎಸ್ಟೇಟ್ ಒಳಗಿಂದ ಬೀಸಿ ಬಂದ ಗಾಳಿ ಇವಳನ್ನು ತಾಕಿ ಹೋಯ್ತು... ಆ ಗಾಳಿ ತಾಕಿದ ತಕ್ಷಣ ಇವಳ ಕೈ ಕಾಲಲ್ಲಿ ಚಲನೆ ಆಯ್ತು... ಆದರೆ ಅದು ಅವಳ‌ ಇಷ್ಟದ ಪ್ರಕಾರ ಅಲ್ಲ... ಯಾರೋ ಅವಳ‌ ಕೈಯನ್ನು ಎಸ್ಟೇಟ್ ಕಡೆ ತಿರುಗಿಸಿದ್ದರು... ನಿಧಾನಕ್ಕೆ ಅವಳ ಪಾದಗಳು ಎಸ್ಟೇಟ್ ಕಡೆ ತಿರುಗಿದ್ವು... ಮನಸ್ವಿಗೆ ಏನು ಮಾಡಲಿಕ್ಕೆ ಆಗ್ತಿಲ್ಲ... ಯಾರೋ ಅವಳಿಂದ ಬಲವಂತವಾಗಿ ಅವಳ ಹೆಜ್ಜೆಯನ್ನು ಎಸ್ಟೇಟ್ ಕಡೆ ಇಡಿಸ್ತಾ ಇರೋ ತರ ಅನಿಸ್ತು....

ಹೌದು ಯಾವುದೋ ಶಕ್ತಿ ಬಲವಂತವಾಗಿ ಅವಳನ್ನು ಎಸ್ಟೇಟ್ ಕಡೆಗೆ ನಡೆಸ್ತಾ ಇತ್ತು... ಮನಸ್ವಿ ಕಿರುಚೋಕೆ ಬಾಯ್ತೆರದು ಕಿರುಚಿದಳು... ಆದರೆ ಅವಳ ಧ್ವನಿ ಅವಳಿಗೇ ಕೇಳಿಸಲಿಲ್ಲ.... ಊರಿನ ಜನ ಹೇಳ್ತಾ ಇದ್ದ ದೆವ್ವದ ಕಥೆ ನಿಜ ಇರಬಹುದಾ ಅನ್ನೋ ಭಯ ಅವಳಲ್ಲಿ ಹುಟ್ಟಿ ಕೊಂಡಿತ್ತು. ಕೈಕಾಲು ಕೂಡಾ ಕದಲಿಸಲು ಆಗ್ದೆ ಇರೋ ಅವಳು, ಅಲ್ಲಿಂದ ತಪ್ಪಿಸಿಕೊಂಡು ಹೋಗೋದು ಸಾಧ್ಯವೇ ಇಲ್ಲ ಅಂತ ಅವಳಿಗೆ ಅನಿಸ್ತು..... ಅಯ್ಯೋ ದೇವರೆ ಅತ್ತೆ ಬೇಡ ಬೇಡ ಅಂತ ಅಷ್ಟು ಹೇಳಿದ್ರು... ಅವರ ಮಾತು ಮೀರಿ ಬಂದಿದ್ದಕ್ಕೆ ತಕ್ಕ ಶಾಸ್ತಿ ಆಗ್ತಿದೆ ಅಂತ ದುಃಖ ಪಟ್ಟಳು....

ಬಲವಂತದ ಹೆಜ್ಜೆಯನ್ನು ಇಡ್ತಾ ಎಸ್ಟೇಟ್ ಗೇಟ್ ಹತ್ತಿರ ಬಂದೇ ಬಿಟ್ಲು..... ಬೇಡ ಅನ್ಕೊಂಡ್ರು ಏನೂ ಮಾಡೋಕ್ಕಾಗದೆ ಗೇಟ್ ದಾಟಿ ಎಸ್ಟೇಟ್ ಒಳಗೆ ಹೋದ್ಲು... ಅವಳು ಹೋದ ತಕ್ಷಣ ಗೇಟ್ ಮುಚ್ಚಿಕೊಂಡಿತು.... ಈಗ ಅವಳ ದೇಹನ ಹಿಡಿದಿದ್ದ ಶಕ್ತಿ ಅವಳನ್ನ ಬಿಟ್ಟು ಬಿಟ್ಟಿತ್ತು... ಮನಸ್ವಿ ವಾಪಸ್ಸು ಬರೋಕೆ ಓಡಿ ಬಂದ್ಲು, ಗೇಟ್ ತೆರೆಯೋ ಪ್ರಯತ್ನ ಮಾಡಿದ್ಲು,ಆದರೆ ಆ ಗೇಟ್ ಸ್ವಲ್ಪ ಕೂಡಾ ಕದಲಲಿಲ್ಲ... ಗೇಟ್ ಹತ್ತಿ ಹೊರಗೆ ಬರೋಣ ಅನ್ಕೊಂಡ್ಲು, ಆದರೆ ಆ ಗೇಟ್ ಎತ್ತರ ನೋಡಿ ಅದು ಸಾಧ್ಯ ಇಲ್ಲ ಅಂತ ಅವಳಿಗೆ ಗೊತ್ತಾಯ್ತು....

ಆ ಟೈಮಿಗೆ ಅವರೂರಿನ ಇಬ್ಬರು ಬೈಕಲ್ಲಿ ಬರ್ತಾ ಇರೋದು ಅವಳಿಗೆ ಕಾಣಿಸ್ತು... ಜೋರಾಗಿ ಅವರನ್ನು ಕರೆಯೋಕೆ ಅಂತ ಪ್ರಯತ್ನ ಮಾಡೋ ವೇಳೆಗೆ ಎಸ್ಟೇಟ್ ಒಳಗಿಂದ ಯಾವುದೋ ಶಕ್ತಿ ಅವಳ ಕಾಲುಗಳನ್ನು ಹಿಡಿದು ಎಳೆದುಕೊಂಡು ಹೋಯ್ತು... ಮನಸ್ವಿಯನ್ನು ಎಳ್ಕೊಂಡು ಹೋದ ಆ ಶಕ್ತಿ ಅವಳನ್ನು ಎಸ್ಟೇಟ್ ಒಳಗಿದ್ದ ಒಂದು ಮನೆ ಮುಂದೆ ತಂದು ಹಾಕಿತ್ತು.........

ಮನಸ್ವಿ ನಿಧಾನವಾಗಿ ಮೇಲೆ ಎದ್ದಳು.... ಸುತ್ತಾ ಇದ್ದ ಕತ್ತಲು ಚಂದ್ರನ ಬೆಳಕಿಂದ ಸ್ವಲ್ಪ ಕಡಿಮೆಯಾಗಿತ್ತು...

ಆ ಭಾರ್ಗವಿ ಎಸ್ಟೇಟ್ ಒಳಗೆ ಮನಸ್ವಿ ಒಬ್ಬಳೆ,,,,ಅರ್ಧಗಂಟೇಲಿ‌ ಮನೇಲಿ ಇರ್ತೀನಿ ಅನ್ಕೊಂಡು ಹೆಜ್ಜೆ ಇಟ್ಟೋಳು,,,ಯಾವುದೋ ಮನೆ ಮುಂದೆ ಭಯದಿಂದ ನಿಂತಿದ್ಲು....ಒಂದು ಸಲ‌ ಹಿಂದೆ ತಿರುಗೋ ಪ್ರಯತ್ನ ಮಾಡಿದ್ಲು, ತಕ್ಷಣ ಯಾರೋ ಗಟ್ಟಿಯಾಗಿ ಹಿಡಿದು ಮುಂದೆ ತಿರುಗಿಸಿದ ಹಾಗಾಯ್ತು ಅವಳಿಗೆ.... ಇಷ್ಟು ಹೊತ್ತು ಯಾರ ಶಬ್ದವೂ ಇಲ್ಲದ ಆ ಎಸ್ಟೇಟ್ ಒಳಗೆ, ಈಗ ಅವಳಿಗೆ ಒಂದು ಹೆಂಗಸಿನ ಧ್ವನಿ‌ ಕೇಳಿಸಿತು......

ಆ ಧ್ವನಿಯು, ಏ ಹುಡುಗಿ ನಡೀ ಮನೆ ಒಳಗೆ ಅಂತು..ಮನಸ್ವಿ ನಡುಗುತ್ತಾ ಯಾರು ನೀವು ಅಂದ್ಲು, ಆಗ ಆ ಧ್ವನಿ , ನನ್ನ ಎಸ್ಟೇಟ್ ಅಲ್ಲಿ ನಿತ್ಕೊಂಡು ನನ್ನನ್ನೇ ಯಾರು ಅಂತ ಕೇಳ್ತೀಯಾ ನಾನೇ ಭಾರ್ಗವಿ... ಈ ಎಸ್ಟೇಟ್ ನಂದೇ ಅಂತ ನಗುತ್ತಾ ಹೇಳಿತು... ಆ ನಗುವಿನ ಜೊತೆಗೆ ಅಬ್ಬರದ ಗಾಳಿ ಜೊತೆಯಾಯ್ತು..... ಮತ್ತೆ ಆ ಧ್ವನಿ ಮನಸ್ವಿಗೆ ನಡಿ ಮನೆ ಒಳಗೆ ಅಂತು... ಬೇರೆ ದಾರಿಯಿಲ್ಲದೆ ಅವಳು ಆ ಮನೆ ಒಳಗೆ ಹೋಗೋಕೆ ನಡೆದಳು... ಮನಸ್ವಿ ಮನೆ ಮುಂಭಾಗಿಲ ಹತ್ತಿರ ಬಂದ ತಕ್ಷಣ ಒಳಗಡೆ ಲೈಟ್ ಹೊತ್ತಿತ್ತು...ಮುಂಭಾಗಿಲು ಕಿರ್ರ್ ಅಂತ ತನ್ನಷ್ಟಕ್ಕೇ ತಾನೇ ತೆಕ್ಕೋಂತು.....

ಮನಸ್ವಿ ಒಳಗೆ ಹೋದ್ಲು..ಒಂದು ಲೈಟ್ ಆನ್ ಆಯ್ತು.....‌ಮನೆ ಹಾಲ್ ವಿಶಾಲವಾಗಿತ್ತು....‌ ಆದರೆ ಆ ಧ್ವನಿ ಮನಸ್ವಿಗೆ ಅಲ್ಲೇ ಮುಂದೆ ಕಾಣ್ತಾ‌‌ ಇದ್ದ ಮೆಟ್ಟಲು ಹತ್ತಿ ಮೇಲೆ ನಡೆ ಅಂತು...ಮನಸ್ವಿ ಮೇಲೆ ಹತ್ತಿದ್ಲು... ಮೇಲೆ ಸಾಲಾಗಿ ಕೋಣೆಗಳಿತ್ತು.... ಆ ಧ್ವನಿ ಎರಡನೆಯ ಕೋಣೆ ಹತ್ತಿರಕ್ಕೆ ನಡಿ ಅಂತು.... ಮನಸ್ವಿ ಅಲ್ಲಿಗೆ ಬಂದ್ಲು...‌ಆ ಕೋಣೆಯ ಬಾಗಿಲು ಓಪನ್ ಆಯ್ತು...ಮನಸ್ವಿ ಒಳಗೆ ಹೋದ್ಲು... ಆ ಧ್ವನಿ ಕೋಣೆಯ ಕಬೋರ್ಡ್ ಹತ್ತಿರ ಹೋಗಿ ಅದರ ಬಾಗಿಲು ತೆಗಿ ಅಂತು.‌ ಮನಸ್ವಿ ಬಾಗಿಲು ತೆರೆದ ಮೇಲೆ ಒಳಗಿದ್ದ ಫೋಟೋ ಆಲ್ಬಂ ತೆಗೆದುಕೊಂಡು ಕೆಳಗೆ ನಡೆ ಅಂತು ಆ ಧ್ವನಿ....

ಮನಸ್ವಿ ಆಲ್ಬಂ ಎತ್ತಿಕೊಂಡಳು. ಕಬೋರ್ಡ್ ಬಾಗಿಲು ಮುಚ್ಚಿ, ಅಲ್ಲೇ ಗೋಡೆಯ ಮೇಲಿದ್ದ ಕನ್ನಡಿ ನೋಡಿದಳು. ಒಂದು ಕ್ಷಣ ಎದೆ ಝಲ್ಲೆಂದಿತು. ಅವಳ ಹಿಂದೆ ಒಂದು ಮನುಷ್ಯ ಆಕೃತಿಯಂಥದ್ದು ಇತ್ತು.. ಅದರ ಮುಖ ವಿಕಾರವಾಗಿತ್ತು.... ಮನಸ್ವಿಗೆ ಅದು ದೆವ್ವ ಅಂತ ತಿಳಿಯಿತು... ಆಲ್ಬಂ ಹಿಡಿದು ಕೆಳಗೆ ಬಂದಳು. ಮನೆಯೊಳಗೆ ಲೈಟ್ ಗಳು ಹೊತ್ತಿಕೊಂಡವು....ಆ ಧ್ವನಿ ಆಲ್ಬಂ ತೆಗಿ ಅಂತು.... ಮನಸ್ವಿ ತೆಗೆದಳು. ಅದರಲ್ಲಿ ಯಾವುದೋ ಕುಟುಂಬದ ಫೋಟೋಗಳು ಒಂದಾಂದ ಮೇಲೊಂದು ಬಹಳ ಸುಂದರವಾಗಿದ್ದವು......

ಮನಸ್ವಿಗೆ ಆ ಫೋಟೋಗಳಲ್ಲಿದ್ದವರೆಲ್ಲಾ ಪರಿಚಯದವರಂತೆ ಕಂಡರು...ಮನಸ್ವಿ ಕೊನೆಯ ಪೋಟೋ ತೆರೆದಳು. ಅವಳ ಬಾಯಿಂದ ಮಾತು ಹೊರಡಲಿಲ್ಲ‌‌.‌.. ಆ ಧ್ವನಿ ಕಿರುಚುತ್ತಾ ಅದು ನಾನೇ ಭಾರ್ಗವಿ ಎಂದಿತು.... ಆದರೆ ಮನಸ್ವಿಗೆ ಆಗಿದ್ದ ಆಘಾತ ಅಷ್ಟಿಷ್ಟಲ್ಲ..... ಏಕೆಂದರೆ ಆ ಕಡೆಯ‌ ಫೋಟೋ ಅವಳಂತೇ ಇತ್ತು.... ಭಾರ್ಗವಿ ಹಾಗೂ ಮನಸ್ವಿ ಇಬ್ಬರೂ ಒಂದೇ ರೀತಿ..... ಮನಸ್ವಿ ಆಗ ಇದು ನಾನು ಅಂದ್ಲು.... ಆ ಧ್ವನಿ ಯಾರೇ ನೀನು, ನನ್ನ ಫೋಟೋ ನೋಡಿ ನಾನು ಅಂತೀಯಾ ಅಂತ, ಆ ಇಡೀ ಮನೆ ಪ್ರತಿಧ್ವನಿಸುವ ಹಾಗೆ ಕೂಗು ಹಾಕಿತು.....

ಮನಸ್ವಿಯ ಮುಂದೆ ತನ್ನ ವಿಕಾರವಾದ ಮುಖದಿಂದ ಕಾಣಿಸಿಕೊಂಡಿತು..ಮನಸ್ವಿಯನ್ನು ಮನೆಯಿಂದ ಹೊರಗೆ ತಂದು ಹಾಕಿತು. ನೆಲದ ಮೇಲಿದ್ದ ಅವಳ ಮುಖದ ಹತ್ತಿರ ತನ್ನ ಮುಖ ತಂದಿತು... ಆ ವಿಕಾರವಾದ ಮುಖ ನೋಡಿ ಮನಸ್ವಿ ಜೋರಾಗಿ ಕಿರುಚಿ ಪ್ರಜ್ಞೆ ತಪ್ಪಿದಳು.... ಆಮೇಲೆ ಇದ್ದಕ್ಕಿದ್ದಂತೆ ಮುಖದ ಮೇಲೆ ಮಳೆ ಹನಿಗಳ ಸಿಂಚನವಾದಂತಹ ಅನುಭವ.... ದೂರದಲ್ಲಿ ಯಾರೋ ಮನಸ್ವಿ ಎಂದು ಕರೆದಂತಾಯಿತು... ಮತ್ತೆ ಅದೇ ನೀರಿನ ಅನುಭವ, ನಿಧಾನವಾಗಿ ಕಣ್ಣು ಬಿಟ್ಟಳು.......

ಮಂಚದ ಮೇಲಿಂದ ಕೆಳಗೆ ಬಿದ್ದಿದ್ದಳು ಮನಸ್ವಿ... ಅವಳನ್ನು ಎಬ್ಬಿಸಲು ಅತ್ತೆ ನೀರು ಚಿಮುಕಿಸಿದ್ದರು...

ಕೈಯಲ್ಲಿದ್ದ ಫ್ಯಾಮಿಲಿ ಫೋಟೋ ಆಲ್ಬಂ ಕೂಡಾ ಪಕ್ಕದಲ್ಲೇ ಬಿದ್ದಿತ್ತು. ಅವರ ಅತ್ತೆ ಅವಳನ್ನು ಎಬ್ಬಿಸಿದರು...‌ ಮಂಚದ ಮೇಲೆ ಕೂತ್ಕೊಂಡ ಮನಸ್ವಿ ಆಲ್ಬಂ ನೋಡೋ ಮೊದಲು ಓದುತ್ತಿದ್ದ ಯಾವುದೋ ಮ್ಯಾಗಜೀನ್ ಅಲ್ಲೇ ಇತ್ತು... ಗಾಳಿಗೆ ಅದು ಓಪನ್ ಆಯ್ತು... ಅದರಲ್ಲಿತ್ತು ಕಥೆ ಭಾರ್ಗವಿ ಎಸ್ಟೇಟ್..... ನಿದ್ದೆ ಮಾಡೋ ಮೊದಲು ಕಥೆ ಓದಿ, ಆಮೇಲೆ ಆಲ್ಬಂ ನೋಡ್ತಾ ನಿದ್ರೆಗೆ ಜಾರಿದ್ದ ಮನಸ್ವಿಗೆ ಈ ತರ ಒಂದು ಭಯಾನಕ ಕನಸು ಬಿದ್ದಿತ್ತು........

ಕಲ್ಪನಾ ಲೋಕದ ವಿಹಾರಿಯ ಮೌನ ಮಾತಾಗುವ ಸಮಯ..

©Yakshitha #GoodMorning
0ac76fd82a0481565a7aa79b3e3ee7db

Yakshitha

White ಸಂಜೆಗತ್ತಲಾಗಲು ಇನ್ನೂ ಹೊತ್ತಿತ್ತು. ಗಿರಿಯಂಚಿನಲಿ ಗೆಳೆಯನೊಡನೆ ಅವಳು ಕಳೆಯುತ್ತಿದ್ದ ಸಮಯವದು ಗೊತ್ತಿಲ್ಲದ ಒಂದು ಹಿತವಾದ ಅನುಭೂತಿಯನ್ನು ಅವರಿಬ್ಬರ ಮನದಲ್ಲಿ ಮೂಡಿಸಿತ್ತು.... ಆ ಸವಿ ಸಮಯದ ಹಿತದ ಜೊತೆಗೆ ಇನಿಯನ ಸಂಗವದು ಮನದಲ್ಲಿ ಪುಳಕಿತ ಭಾವನೆಗಳ ಝರಿಯನ್ನು ಹರಿಸಿತ್ತು.. ತಂಪಾಗಿ ಬೀಸುತ್ತಿದ್ದ ಗಾಳಿ, ಕವಿದ ಕಾರ್ಮೋಡಗಳವು ಅವಳ ಹಾಗೂ ಅವಳನಿಯನ ಮೇಲೆ ಆ ಸೂರ್ಯನ ನೋಟ ಬೀಳದಿರಲೆಂದೇ ಭಾಸ್ಕರನ ನೋಟಕ್ಕೆ ಅಡ್ಡವಾಗಿ, ಅವನ ಕಿರಣಗಳಿಗೆ ಅಡ್ಡಿಯಾಗಿ ಬಂದಂತೆ ಕಂಡಿದ್ದವು...

ಮರವೊಂದರ ಕೆಳಗೆ ಎದುರು ಬದುರಾಗಿ ಕುಳಿತಿದ್ದ ಆ ಇಬ್ಬರ ನೋಟಗಳವು ಕಣ್ಸನ್ನೆಯಲ್ಲೇ ಸಾವಿರ ಭಾವಗಳ, ನೂರಾಸೆಗಳ ಉಲಿಯುತಿರುವಾಗಲೇ, ಅವನ ನೋಟದ ತೀಕ್ಷ್ಣತೆಯನ್ನು ತಾಳಲಾರದ ಸುಕೋಮಲೆಯವಳು ನಾಚಿ ತಲೆ ಬಾಗಿಸಿದಳು... ಅವಳ ಇನಿಯ ತನ್ನ ಕೈ ಚಾಚಿ ಅವಳ ಗಲ್ಲವನ್ನು ಹಿಡಿದು, ಏಕೆ?? ಈ ನಾಚಿಕೆ...‌ ನಾ ಮಾತನಾಡಲೇ ಇಲ್ಲ ನಿನಗೆ ನಾಚಿಕೆಯೇತಕೆ??? ಮೌನದಿ ನಾನಿರುವಾಗ ನನ್ನ ನೋಟಕ್ಕೆ ನೀ ನಾಚಿದರೆ, ನಾ ಸವಿ ಮಾತುಗಳನ್ನೇನಾದರೂ ಆಡಿದರೆ ಹೇಗೆಂದು ಅವಳನ್ನು ಕೇಳಿದನು...

ಇನಿಯನ ಪ್ರಶ್ನೆಗೆ ಉತ್ತರ ಹೇಳುವ ಮನಸ್ಸಿದ್ದರೂ ಕೂಡಾ ನಾಚಿಕೆಯೆಂಬ ನಗವನ್ನು ಧರಿಸಿದ್ದ ಮಂದಹಾಸಿನಿ ಭಾಮೆಯು ಏನು ಹೇಳಲಾರದೆ ಮುಗಳು ನಗೆಯೊಂದನ್ನು ತೋರಿ, ಅಲ್ಲಿಂದ ಎದ್ದು ಮರದ ಬಳಿ ಹೋಗಿ ನಿಂತು, ಇನ್ನೊಂದು ದಿಕ್ಕಿನೆಡೆ ಕಂಡ ಗಿರಿ ಶಿಖರದ ಆ ಸುಂದರ ಪ್ರಕೃತಿಯ ರಮಣೀಯತೆಯ ಕಡೆಗೆ ನೋಟ ನೆಟ್ಟಳಾದರೂ, ಇನಿಯ ತನ್ನ ಬಳಿ ಬರುವನೇನೋ ಎಂದು ಅವಳ ಹಿನ್ನೋಟ ಬೆನ್ನೋಟವಾಗಿ ನೋಡುವಾಗಲೇ, ತಿರುಗಿ ನೋಡುವ ಭಾವ ಮನದಲ್ಲಿ ಮೂಡಿದ್ದರೂ ಕೂಡಾ ಹಿಂದೆ ತಿರುಗಿ ನೋಡದೆ, ತನ್ನ ಮನದ ಆಸೆ ಹೇಳದೆ ಎದುರಲ್ಲಿದ್ದ ಸೌಂದರ್ಯದ ಸವಿಯನ್ನು ಅನುಭವಿಸುತಿರುವ ಹಾಗೆ ನಿಂತಳು...

ಆದರೆ ಅವಳ ಮನದ ಆಸೆಯ ಹಕ್ಕಿಯು ಹಾರಿ ಅವಳಿನಿಯನ‌ ಕಿವಿಯಲಿ ಅವಳ ಭಾವ ಲಹರಿಯನ್ನು ಉಲಿಯುತೇನೋ ಎಂಬಂತೆ ಕುಳಿತವನು ಎದ್ದು ಅವಳತ್ತ ಹೆಜ್ಜೆ ಹಾಕುವಾಗಲೇ, ಅವಳ ಯೌವ್ವನ ಗಿರಿ ಶಿಖರಗಳ ಹಿಂದೆ ಅಡಗಿದ್ದ ಹೃದಯದ ನಾದವು ದುಪ್ಪಟ್ಟಾಗಿರುವಾಗಲೇ, ಅವನ ಗಡುಸಾದ ಕೈ, ನುಣ್ಣನೆಯ ನುಣುಪಾದ ಅವಳ ನಡುವನ್ನು ಬಳಿಸಿ, ಸೆಳೆದ ಬಲಕೆ ಮನೋಹರಿಯು ಹಿಂದೆ ತಿರುಗಿದಳಾಗ....‌

ಕಣ್ಣು ನೆಲದ ಕಡೆ, ಹಾರಿದ ಮುಂಗುರುಳು ಬೇಡ ಬೇಡ ನಾಚಿಕೆ ನನ್ನ ಬಿಡು ಎಂಬಂತೆ ಅತ್ತ ಇತ್ತ ಅಲುಗಾಡುವಾಗಲೇ, ಕಣ್ಣ ರೆಪ್ಪೆ ಗಳು ಬಡಿದು ಅವನ ಅಪ್ಪುಗೆಗೆ ಒಪ್ಪಿಗೆ ಕೊಟ್ಟಂತೆ ಸೂಚಿಸಿರಲು, ದೇಹವದು ಕಂಪಿಸಿ ಆ ಜುಮ್ಮೆನ್ನುವ ಅನುಭವದ ತಲ್ಲಣವ ಸಾರಿ ಹೇಳುತಿರೆ, ಅದರಗಳು ಮಧುರಾನುಭೂತಿಗೆ ತವಕಿಸುತಿವೆಯೇನೋ ಎಂಬಂತೆ ಸಣ್ಣಗೆ ಅದುರಿರಲು, ಇನಿಯನ ಬಿಗಿಯಪ್ಪುಗೆ ಅವಳನ್ನು ಬಂಧಿಸಿ ಬಿಟ್ಟಿತು... ಅವನ ಆ ಬಾಹು ಬಂಧನದಲ್ಲಿ ಕರಗಿ ನೀರಾಗಿ ಅಲ್ಲಿಂದ ಹರಿದ ಆ ಪ್ರಕೃತಿಯ ದೇವಿಯನು ಹಿಡಿಯಲು ಹೊರಟ ಪುರುಷನು ಅವಳ ಹಿಂದೆ ತಾನು ಓಡಲಾರೆ ಎಂದು ಅರಿತು ಎಲ್ಲೇ ಹರಿದರೂ ಕಡೆಗೆ ಅವಳು ಬಂದು ಸೇರುವ ಗಮ್ಯ ತಾನಾಗಿ ಸಾಗರನ ರೂಪವನು ತಳೆದು ನಿಂತು ಅವಳ ಆಗಮನಕೆ ಕಾಯುವಾಗಲೇ,

ಗಿರಿ ಶಿಖರಗಳಿಂದ ಹರಿದು, ಭೋರ್ಗರೆವ ನದಿಯಾಗಿ, ಕವಲೊಡೆದು ವಿವಿಧ ಹೆಸರುಗಳಲಿ ತಾನಾಗಿ, ತನ್ನ ಇನಿಯನ ಕಡೆಗೆ ಧುಮ್ಮಿಕುವ ಜಲಧಾರೆಯಾಗಿ ಬಂದ ಆ ಸುಕುಮಾರಿ ಚೆಲುವೆ ಕಡೆಗೆ ಸಾಗರನಲ್ಲಿ ಬೆರೆತು ಭಾವವಾದಳು, ಪ್ರೇಮಕಾವ್ಯದ ರಸಧಾರೆಯಾದಳು.....

©Yakshitha #GoodMorning love story
0ac76fd82a0481565a7aa79b3e3ee7db

Yakshitha

White ಬಯಸಿದ್ದನ್ನು ಪಡೆಯಬೇಕೆನ್ನುವ ಹಠ ಇರಬೇಕು ಆದರೆ ಮತ್ತೊಬ್ಬರಿಂದ ಕಿತ್ತುಕೊಂಡು ಬದುಕುವ ಚಟ ಇರಬಾರದು . ಬದುಕಿನಲ್ಲಿ ಹಠ ಇರಲಿ ಆದರೆ ಯಾರನ್ನು ತುಳಿದು ಬದುಕುವ ಮನಸ್ಥಿತಿ ಬೇಡ .

©Yakshitha #love_shayari
loader
Home
Explore
Events
Notification
Profile