Nojoto: Largest Storytelling Platform
geetaberad7239
  • 40Stories
  • 75Followers
  • 110Love
    0Views

Geeta. Berad

  • Popular
  • Latest
  • Video
ba42b07733abef7ba1b07cc05e8a07fa

Geeta. Berad

ಭಾನು.. 

ಎರಡೂ ಕೈ ಗಳಲ್ಲಿ ನಿನ್ನ 
ಹಿಡಿಯ ಬಯಸೆ ತಾನು
ಕುಳಿತ ಮುಗಿಲ ಕಡೆಗೆ ಮುಖವ 
ಮಾಡಿ  ಮನುಜ ನೋಡು..
ನೋಡಿ, ನೋಡಿ ನಿನ್ನ ಸೊಬಗ 
ತನಿಯದೆನ್ನ ಮನವು
ಬಾನಿಗೊಬ್ಬನೇ ನೀ ಭಾನು..
ಅಂದ, ಚಂದ, ಎಲ್ಲದಕ್ಕೂ 
ನಿನಗೆ ಇಲ್ಲ ಸಾಟಿ ಯಾರೂ ..
ವಿಸ್ಮಯ ಗಳ ಆಗರ, 
ತನ್ಮಯತೆಯ ಸಾಗರ
ಬಾನು ಭುವಿಗಳೆರಡು 
ನಿನ್ನ ಅಧೀನವಲ್ಲವೇ ನೀ ಹೇಳು..
ಬಂದರೆ ನೀ ಬೆಳಕು, 
ಬಾರದಿದ್ದರೆ ತಮಸು..
ಅಧಿಕವಾದರೆ ನಿನ್ನ ಹೊಳಪು 
ಜಗದ ಎಲ್ಲ ಜೀವಕೇ ಅಳುಕು..
ಕಷ್ಟವೋ, ಸುಖವೊ
ನಿನ್ನದೊಂದೇ ಓಟವು.. 
ಬೇಸರ, ಬಿನ್ನಾಣಗಳಿಲ್ಲದಂಥ ಚಲನೆ. 
ನಿನ್ನ ಕಾಯಕವೇ ನಿನಗೆ ಮೆರಗು..

ba42b07733abef7ba1b07cc05e8a07fa

Geeta. Berad

ಆಗುತಿಲ್ಲ.. 

ಬರೆಯುವ ಮನಸು  
ಬರೆಯಲು ಆಗುತಿಲ್ಲ.
ತೆರೆ,ಮರೆಯ ಸರಿಸುವ ಆಸೆ 
ಸರಿಸಲೂ ಆಗತಿಲ್ಲ.
ಎಲ್ಲ ಮರೆತು ಗಹ ಗಹಿಸಿ ನಗುವ ಹಂಬಲ 
ನಗಲೂ ಆಗತಿಲ್ಲ.
ಇರುವುದೆಲ್ಲವ ತೊರೆದು
ಬಚ್ಚಿಟ್ಟು ಕೊಳ್ಳುವ ಹುಚ್ಚುತನ.
ತೊರೆಯಲೂ ಆಗುತಿಲ್ಲ.
ಭವ ಬಂಧನವ 
ಕಳಚಿ ಶಾಂತ ಶವವಾಗುವ
ತವಕ..
ಜವಾಬ್ದಾರಿ ಬಿಡುತಿಲ್ಲ.
ಈ...
ಇಲ್ಲ....ಸಲ್ಲ  ದರ ನಡುವೆ
ಬದುಕಲೂ ಆಗುತಿಲ್ಲ....
...ಗೀತಾ.ಬಿ.ಬೇರಡ..

ba42b07733abef7ba1b07cc05e8a07fa

Geeta. Berad

ಸಂಸಾರದದಲ್ಲಿ ಸ ರಿ ಗ ಮ..

ಇರಬೇಕು ಪ್ರೀತಿ ಪರಸ್ಪರ, 
ತುಂಬಿರಬೇಕು ವಿಶ್ವಾಸ  ನಿರಂತರ,
ನಂಬಿಕೆಯೇ ಆಗಿರಲಿ ಬುನಾದಿ ಸಹಚರ, 
ತಪ್ಪದಿರು ಕೊಟ್ಟ ಮಾತಿಗೆ ಪ್ರೀಯಕರ, 
ಸುಳ್ಳೆಂಬುದೇ ಸುಳಿಯದಿರಲಿ ನಮ್ಮ ಹತ್ತಿರ.
ಆಗಲೇ ಕೇಳುವುದು ಸಂಸಾರದಲ್ಲಿ ಸ ರಿ ಗ ಮ.. 

ತಂದೆ, ತಾಯಿಯೇ ಇರಲಿ, ಸಹೋದರರೇ ಬರಲಿ
ನಮ್ಮವರು, ನಿಮ್ಮವರೆಂಬ ಬೇಧ ಬೇಡ
ಸಹಾಯವನ್ನೇ ಕೇಳಲಿ, ಸಹಕಾರವೇ ಬಯಸಲಿ
ಜೊತೆಯಾಗಿ, ಹಿತವಾಗಿ ಸಹಕರಿಸೋಣ
ಕೈಲಾದ ಸಹಾಯ, ಸೇವೆ ಮಾಡೋಣ
ನೋಡಾಗ ನಮ್ಮ ಸಂಸಾರದ ಪ ದ ನಿ ಸ.. 

ಮಕ್ಕಳಿಗೆ ಮಮಕಾರ ಅತಿಯಾಗದಿರಲಿ 
ಕಾಲಕ್ಕೆ ತಕ್ಕಂತೆ ಶಿಷ್ಠಾಚಾರವೂ ದೊರಕುತಿರಲಿ 
ಅವರಿಗಾಗಿ ಆಸ್ತಿಯ ಮಾಡದಿದ್ದರೂ ನಾವು
ಅವರನ್ನೇ ಆಸ್ತಿಯನ್ನಾಗಿಸಿ ಬಿಡೋಣ 
ಅದುವೆ ನಮ್ಮಯ ಗೆಲುವಲ್ಲವೇ ಒಡೆಯ
ಚಂದದ ತಾಳ ತಪ್ಪದ ಸಂಸಾರ ರಾಗವಿದು ನಮ್ಮದು
ಸ   ರಿ   ಗ   ಮ  ಪ   ಧ  ನಿ  ಸ..
     
      ರಚನೆ : ಗೀತಾ. .ಬೇರಡ. (ಶಿಕ್ಷಕಿ)

ba42b07733abef7ba1b07cc05e8a07fa

Geeta. Berad

ಸರಳ ಜೀವನ.  ಸರಳ ಆದರ್ಶ.. 

ನೀನೇ ಶ್ರೇಷ್ಠ ಎಂದು ಎಂದಿಗೂ ಬೀಗಬೇಡ.. 
ನೀನು ಕೇವಲ ಎಂದು ಎಂದಿಗೂ ಭಾವಿಸಬೇಡ.. 
ಎಲ್ಲರೊಳಗೊಬ್ಬನಾಗಿ  ನಿನ್ನ ಸಾಧನೆಯ ಹಾದಿಯನ್ನು  ಮಾತ್ರ ಮರೆಯಬೇಡ..

ba42b07733abef7ba1b07cc05e8a07fa

Geeta. Berad

ಮರಳಲ್ಲಿ ಕಟ್ಟಿದ ಮನೆ.. 

ಜೀವನವಿದು ಭೂಮಿಯ ಮೇಲೆ
ಮರಳಲ್ಲಿ ಕಟ್ಟಿದ ಮನೆ..
ಶಾಶ್ವತವಲ್ಲ ಇಲ್ಲಿ ಯಾವದೇ
ಸಂಬಂಧ ತಿಳಿದು ನಡೆ.. 
ನಮ್ಮವರು, ತಮ್ಮವರು ಎಂಬುವವರೆಲ್ಲ
ಬರುಬಹುದು ನಾಲ್ಕು ಹೆಜ್ಜೆಯಷ್ಟೆ ಕಡೆ, ಕಡೆ..
ಸ್ವಾರ್ಥಿಗಳು ಇಲ್ಲಿ ನಾವೆಲ್ಲ. 
ಯಾತಕ್ಕೆ ಈ ಸೆಣಸಾಟ ನಾ ಕಾಣೆ.. 
ಎಷ್ಟೆ ತೂಗಿ, ಅಳೆದರೂ ಲೆಕ್ಕಕ್ಕೆ ಸಿಗುತಿಲ್ಲ
ಇದೆಂಥ ಬಯಲಾಟ ನೀ ಹೇಳೆ.. 
ಆಯುಷ್ಯವಿಲ್ಲ ಮರಳಿನ ಈ ಮನೆಗೆ
ಬಿದ್ದು ಹೋಗುವ ಈ ಬದುಕಿಗಾಗಿ 
ಯಾಕಿಷ್ಟು ಹಪ ಹಪಿಕೆ..
ನಾಲ್ಕು ದಿನದ ಸಂತೆ ಮುಗಿಸಿ ಹೋಗೋಣ
ನಗುತ ನಗಿಸಿ ನೆಮ್ಮದಿಯಿಂದ ಮೇಲಿನ ಕಡೆಗೆ..

ba42b07733abef7ba1b07cc05e8a07fa

Geeta. Berad

ಬರಹ, ಭಾವನೆ .. 

ಶಬ್ಧಗಳ ಜೋಡಿಸಿ ಬರಹದ ಕಲೆ ಕಲಿತೆ, 
ಬರಹಕ್ಕೆ ನನ್ನ ಭಾವ ತುಂಬ ಹೊರಟೆ. 
ಓದುಗರ ನೂರು ಬಗೆಯ ಭಾವಗಳ
ಬಲೆಯೊಳಗೆ ಸಿಲುಕಿ ನಾ ಸೋತು ಕುಳಿತೆ.. 

ಯೋಚಿಸುತ್ತಾ ಕುಳಿತಾಗ ನನ್ನ ಭಾವಗಳ
ಸುಳಿಯೊಳಗೆ ಅರಿವಿಲ್ಲದೆ ಇಳಿದೆ. 
ಇಳಿದು ಎನ್ನಭಾವನೆಗಳಿಗೆ
ಶಬ್ಧಗಳ ರೂಪ ಕೊಟ್ಟೆ.. 
ಆಗ ಬಂತೆನ್ನ ಬರಹಕ್ಕೆ ಚೈತನ್ನದ ಕಳೆ. 
ಓದುಗರ ಮನದಲ್ಲಿ ಉಳಿಯುವಂತಹ ಬೆಲೆ..

ba42b07733abef7ba1b07cc05e8a07fa

Geeta. Berad

ಸಂವಿಧಾನ ದಿನ.. . 

ಬನ್ನಿ ಬನ್ನಿ ಕೈ ಮುಗಿದು ಆಚರಿಸುವ  
ಈ ದಿನ ಸಂವಿಧಾನ ತಿಳಿಯುವ ದಿನ.. 
ಅತಿ ಧೀರ್ಘ ಸಂವಿಧಾನವಿದು
ಅಧಿಕಾರದ ಮೂಲಮಂತ್ರವಿದು
ಇದರ ಶಿಲ್ಪಿ  ನಮ್ಮ ಅಂಬೇಡ್ಕರ್ ರು
ಅವರ ಜ್ನಾನಕೆ ಯಾರು ಸಮರು
ಭಾರತೀಯರಿಗೆ 
ಹಕ್ಕು, ಅಧಿಕಾರ,ಆಚರಣೆ, ಅಪರಾಧಗಳ 
ತಳಪಾಯ ಹಾಕಿ ಕೊಟ್ಟು
ಶಾಂತಿ, ಪ್ರೀತಿ, ಸಮಾನತೆಯ ತಿಳಿಸಿ ಕೊಟ್ಟು
ಮೂರು ಅಂಗಗಳಲಿ ದೇಶವ ಹಿಡಿದಿಟ್ಟು
ಉದ್ಧರಿಸಿ ಹೋದ ಮನು
ನೆನೆಯಬೇಕು ಅವರ ನಾವು
ಹೆಮ್ಮೆಯಿಂದ ಕೈಮುಗಿದು
ಸಂವಿಧಾನವ ತಿಳಿವ ಬನ್ನಿ
ಇತರರಿಗೂ ತಿಳಿಸಿ ಹೇಳಿ
ನಮ್ಮದಿದುವೆ ಭಾರತ, ಪ್ರಜೆಗಳಿಗಾಗೆ
ಇದರ ಹಿತ. ಸಂವಿಧಾನ @755201##

ಸಂವಿಧಾನ @755201##

ba42b07733abef7ba1b07cc05e8a07fa

Geeta. Berad

ಗೋಧೂಳಿ ಸಮಯ.. 

ಪಡವಣದಲಿ ಕುಳಿತು ಕರೆಯುತಿಹಳು ರವಿಯ.
ಹೊತ್ತಾಯಿತು ಈಗ  ಬಾ ಬೇಗ ಇನಿಯ
ಬಂತಿದೊ ಸಮಯ,  ನವಿರಾದ ಸಮಯ, 
ಗೋಧೂಳಿ ಸಮಯ. 

ಮುಂಜಾವಿನ ಅಗಲಿಕೆ ಬೇಸರಿಕೆಯ ಚಡಪಡಿಕೆ 
ದಿನ ಪೂರ್ತಿ ನಿನ್ನಯ ಸವಿ ಸಾನಿಧ್ಯದ ಅವಸರಿಕೆ
ಕಳುಹೆಲ್ಲ ಕೆಲಸಗಾರರ ಅವರಾಶ್ರಯ ತಾನಕೆ. 

ತಂಗಾಳಿಯ ತಂಪು ಸೋಕುತಿಹುದು ನನ್ನ
ತಿಳಿ ಬೆಳಕಿನ ಚಂದ್ರ ಹೊಂಚು ಹಾಕುತಿಹ ಮೆಲ್ಲ
ಕಡೆಗಣಿಸಿ ಎಲ್ಲ ಕಾದಿಹೆನು ನಾ ನಿನ್ನ .

ಬಂಗಾರದ ನಿನ್ನ ಹೊಂಬೆಳಕ ಸೌಂದರ್ಯ
ಗೋಧೂಳಿಯ ಸವಿ ಸಮಯದಲಿ ಕಾದಿದೆ ಆಂತರ್ಯ. 
ನಿರ್ಮಲವಾದ ಈ ಸಮಯ 
ಸುಹಾಸಿನಿಯರಿಗೆ ಹರುಷೋದಯ.

ದಿನ ಪೂರ್ತಿಯ ಹೈರಾಣ ಬದಿಗೊತ್ತುವ ಉತ್ಸಾಹ.
ಗೋವುಗಳಿಗೆಲ್ಲ ಸುಖನಿದ್ರೆಯ ತಿಲ್ಲಾನ
ಎಲ್ಲರ ದನಿವಾರಿಸಿ ಬಾ ಬೇಗ ಇನ್ನು ಕಾದಿಹೆನು
ಕೇಳು ಅವರಂತೆ ನಾನೂ. 
   ರಚನೆ: ಗೀತಾ ಬೇರಡ(ಶಿಕ್ಷಕಿ) ಗೋಧೂಳಿ ಸಮಯ #755201#@s3

ಗೋಧೂಳಿ ಸಮಯ 755201#@s3

ba42b07733abef7ba1b07cc05e8a07fa

Geeta. Berad

ನಲ್ಲೆ

ಆಕಾಶಕ್ಕೆ ಏಣಿ  ಹಾಕಿ ಕಸಿದು ತರಲೆ ಚಂದದ ತಾರೆ
ಸಾಗರದಾಳಕೆ ಹಗ್ಗ ಇಳಿಸಿ ಹೆಕ್ಕಿ ತರಲೆ ಸ್ವಾತಿ ಮುತ್ತು
ಪಟಪಟನೆ ಸಿಡಿಯುತಿಹ ಕುಡಿನೋಟದ ಕಿಡಿಗೆ
ಪುಟಪುಟನೆ ಪುಟಿಯುತಿದೆ ನನ್ನೀ ಮನಸು ಮುದ್ದು
ನಾ ಏನು ಮಾಡಲಿ ಹೇಳು ಒಮ್ಮೆ 
ಕವಿದು ಕೂತಿದೆ ನಿನ್ನ ಮಬ್ಬೆ
ಕಾಣೆಯಾಗಿದೆ ನನ್ನ ನಿದ್ದೆ
ಪ್ರೀತಿ ಹೊಂಡಕೆ ನಾನು ಬಿದ್ದೆ
ನೀನು ಒಪ್ಪಿ ಬಂದರೆ ನಾ ಗೆದ್ದೆ

ba42b07733abef7ba1b07cc05e8a07fa

Geeta. Berad

ಪುರುಷರ ದಿನಾಚರಣೆಯ ಶುಭಾಶಯಗಳು 

ಕಲ್ಲಂತಹ ಮನಸ್ಸೂ ಕತ್ತಲಲ್ಲಿ ಅಳುವುದು
ಅಹಂ ಭಾವನೆಯಿದ್ದರೂ ಇತರರ ರಮಿಸುವುದು
ತನ್ನಾತ್ಮದೊಲವಿಗೆ ತನ್ನನ್ನೇ ಸಮರ್ಪಿಸುವುದು
ತನ್ನ ನೋವ ನುಂಗಿ  ನಂಬಿದವರ ನಗಿಸುವುದು
ಹೆಗಲ ಮೇಲೆ ಹೊತ್ತು ಹೊಂಬೆಳಕ ತೋರಿಸುವುದು
ತಂದೆಗೂ, ತಾಯಿಗೂ , ಪತ್ನಿಗೂ, ಮಕ್ಕಳಿಗೂ 
ಆಸರೆಯಾಗಿ ನಡೆಯುವುದು
ಬಲ್ಲೆವೆಮ್ಮ ಹಿಂದಿಹುದು ನಿಮ್ಮ ಕಾಣದ ಕೈಗಳೆಂದು
ತಂದೆಯಾಗಿ, ಸಹೋದರನಾಗಿ, ಜೊತೆಗಾರನಾಗಿ
ಸನ್ಮಿತ್ರನಾಗಿ ಹೆಂಗಳೆಯರ ಹಿತಾಭಿಲಾಷಿಯಾಗಿ 
ಜೀವನದ ಕೊನೆತನಕ ಹಿತವಾಗಿ ಸಹಕರಿಸುವುದು
ಪುರುಷ ಪ್ರಧಾನ ಸಮಾಜದಲ್ಲಿ ಪುಟವಿಟ್ಟ ಚಿನ್ನದಂತೆ
ವಾತ್ಸಲ್ಯದ ಸೆಲೆಯಾಗಿ ಸಮಚಿತ್ತದಿಂದ 
ಸಕಲರನ್ನೂ ಸಲಹುತಿರುವ ಪುಣ್ಯಾತ್ಮ ಪುರುಷರಿಗೆ
ಪ್ರೀತಿಯ ಸಹೋದರಿಯ ಶುಭ ಹಾರೈಕೆಯ
ಪುರುಷರ ದಿನಾಚರಣೆಯ ಶುಭಾಶಯಗಳು

loader
Home
Explore
Events
Notification
Profile