ದೇವೀ ಚಂದ್ರಘಂಟ ಪಿಂಡಜಪ್ರವರಾರೂಢಾ ಚಂದಕೋಪಾಸ್ತ್ರಕೈರ್ಯುತಾ ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ।। ಚಂದ್ರಘಂಟ ದೇವಿಯನ್ನು ಶಾಂತಿ ಮತ್ತು ಜೀವನದ ಅಭ್ಯುದಯಕ್ಕಾಗಿ ಪೂಜಿಸುವರು. ಘಂಟೆ ಅಥವಾ ಬೆಲ್ ಆಕಾರದಲ್ಲಿ ಅವಳ ಹಣೆಯ ಮೇಲೆ ಚಂದ್ರ ಅಥವಾ ಅರ್ಧ ಚಂದ್ರವನ್ನು ಹೊಂದಿದ್ದಾಳೆ. ಈ ದೇವಿಯು ಆಕರ್ಷಕವಾಗಿದ್ದು ಬಂಗಾರದ ಪ್ರಕಾಶಮಾನವಾದ ಬಣ್ಣ ಹೊಂದಿರುವಳು. ಚಂದ್ರಘಂಟ ದೇವಿಯು ಹತ್ತು ಕೈಗಳನ್ನು, ಮೂರು ಕಣ್ಣುಗಳನ್ನು ಹೊಂದಿರುವುದಲ್ಲದೆ, ಧೈರ್ಯದ ದೇವಧೂತಳಾಗಿದ್ದು, ರಾಕ್ಷಸರ ವಿರುದ್ಧ ಹೋರಾಡುವಲ್ಲಿ ಹೆಚ್ಚಿನ ಶಕ್ತಿಯನ್ನು ಹೊಂದಿರುತ್ತಾಳೆ. ©DreamBeliever321 #navratri #Life #festivevibes