Nojoto: Largest Storytelling Platform

d.p cherie

ಆ ಮನಸನ್ನು ಕಾಯುತ್ತ... #dpcherie #ಮನಸು #ಅವನು #ಗೆಳೆಯ #ಇನಿಯ #yqjogi_kannada

read more
ಹೇ ಗೆಳೆಯನೇ,
ಇನಿಯನೇ,,
ನೀ ಊಹಿಸುವ ಲೋಕವನ್ನು
ನಾ ಸಿಂಗರಿಸುವೆ...
ನೀ ನಡೆವ ಹಾದಿಯಲ್ಲಿ,
ತಿರುವು ನಾನಾಗುವೆ...

ಕುಳಿತಲ್ಲಿ ಕನಸಾಗಿ,
ನೀ ನೆನೆವ ನೆನಪಾಗಿ,
ನೆಪವಿಲ್ಲದ ಒಲವಾಗಿ,
ಅಂತ್ಯವೇ ಇಲ್ಲದ ಚಿಲುಮೆಯಾಗುವೆ....

ನಿನ್ನ ಪ್ರೀತಿಯ ಕಡಲನ್ನು,
ಸುತ್ತರಿದ ಭೂಮಿ ನಾನಾಗ ಬಯಸುವೆ...

 ಆ ಮನಸನ್ನು ಕಾಯುತ್ತ...
#dpcherie #ಮನಸು #ಅವನು #ಗೆಳೆಯ #ಇನಿಯ #yqjogi_kannada

d.p cherie

...!!! #dpcherie #ನಿರಾಕರಣೆ #ignorance #MyThoughts #ಕನ್ನಡ #ಕನ್ನಡದಕಂದ #ಮನಸು #yqjogi_kannada

read more
ನಿರಾಕರಣೆಯ ಪರಮಾವಧಿ, ತಲುಪಲು ಬಿಡಬೇಡಿ!!
ನಿಮ್ಮ ವ್ಯಕ್ತಿತ್ವದ ದಹನವಾದೀತು!!! ...!!!
#dpcherie #ನಿರಾಕರಣೆ #ignorance #mythoughts #ಕನ್ನಡ #ಕನ್ನಡದಕಂದ #ಮನಸು #yqjogi_kannada

d.p cherie

ಚಿತ್ತ.. ನಿನ್ನತ್ತರ!!! #dpcherie #ಚಿತ್ತ #ಉತ್ತರ #ಮನಸು #ಭಾವನೆ #ಅಲೆಗಳು #ಎದೆಬಡಿತ #yqjogi_kannada

read more
ಮತ್ತದೇ ಭಾವದಲೆ ಅಪ್ಪಳಿಸಿ ಬಂದಿದೆ..
ಹೃದಯ ಸಾಗರದ ತೀರದಲ್ಲಿ, ಕೈಬೀಸಿ ಕರೆದಿದೆ...
ಕೈಹಿಡಿದರೆ ಭಾವದಲೆಗಳ ನಡುವೆ ತೊಯ್ಲಾಟ!
ತೀರದಲ್ಲೆ ಉಳಿದರೆ, ಆಲೋಚನೆಯ ಬಿಸಿ ಬೇಗೆ!!

ಎತ್ತ ಸಾಗುವುದೋ!!
ಚಿತ್ತದುತ್ತರಕೆ ಕಾದು ಕುಳಿತಿರುವೆ...
 ಚಿತ್ತ.. ನಿನ್ನತ್ತರ!!!
#dpcherie #ಚಿತ್ತ #ಉತ್ತರ #ಮನಸು #ಭಾವನೆ #ಅಲೆಗಳು #ಎದೆಬಡಿತ #yqjogi_kannada

d.p cherie

ಬಿಟ್ಟು ನಡೆ.. ದಯಮಾಡಿ... #dpcherie #livemealone #Live #leavemealone #myfeelings #ಕನ್ನಡ_ಬರಹಗಳು #ಮನಸು #yqjogi_kannada

read more
ಕಣ್ಮರೆಯಾಗು ನೀ,
ಕಣ್ಣೀರು ತರಿಸದೆ..

ಮೊದಲೇ ನೊಂದ ಜೀವ ನನದು,
ಉಸಿರ ಲಾಲಿ ಮರೆವುದೇನೊ! ನೀ ಬಾರದೆ...

ಬಿಟ್ಟು ಹೋಗು ನೀ,
ದಯಮಾಡಿ,
ಹೇಳದೆ ಕೇಳದೆ...!!! ಬಿಟ್ಟು ನಡೆ.. ದಯಮಾಡಿ...
#dpcherie #livemealone #live #leavemealone #myfeelings #ಕನ್ನಡ_ಬರಹಗಳು #ಮನಸು #yqjogi_kannada

d.p cherie

ಬೆಲೆತೆರಬೇಕಾದೀತು ಎಚ್ಚರಿಕೆ!! #dpcherie #ಬೆಲೆಕಡಿಮೆಯಾಗಲ್ಲ #ಕನಸಿನಬಾಗಿಲು #ಕನಸು #ಮನಸು #yqjogi_kannada #mywritings #youngwriter

read more
ಕನಸಿನ ಕೋಣೆಯ ಬಾಗಿಲು ಸಧ್ಯಕ್ಕೆ ತೆರೆದಿದೆ,
ಒಳಬರುವವರಿಗೆ ಪ್ರವೇಶ, ಉಚಿತ...
ಮುಂಬರುವ ದಿನಗಳಲ್ಲಿ, ಬೆಲೆತೆರಬೇಕಾದೀತು!!!
ಆ ಬೆಲೆ, ಕಟ್ಟಲಾಗದಾದೀತು!!! ಬೆಲೆತೆರಬೇಕಾದೀತು ಎಚ್ಚರಿಕೆ!!
#dpcherie #ಬೆಲೆಕಡಿಮೆಯಾಗಲ್ಲ  #ಕನಸಿನಬಾಗಿಲು #ಕನಸು #ಮನಸು #yqjogi_kannada #mywritings #youngwriter

d.p cherie

ಕನಸಿಗು ಕಣ್ಣು ಉಂಟೆ! #dpcherie #ಕನಸಿನಕಣ್ಣು #ಕನಸುವಾಸ್ತವ #ಕನಸೇ #ಮನಸು #ಕನಸುಮನಸು #yqjogi_kannada #mylines

read more
ಕನಸಿನ ಬಹುಪಾಲು,
ಮನಸಿನ ಆಲೋಚನೆ...
ಕನಸಲ್ಲೇ ಸಿಗಬಹುದೆ,,
ಎಲ್ಲದರ ಮುನ್ಸೂಚನೆ!!!

ಕನಸಿಗು ಕಣ್ಣುಂಟು, ಎಚ್ಚರಿಕೆ!! ಕನಸಿಗು ಕಣ್ಣು ಉಂಟೆ!
#dpcherie #ಕನಸಿನಕಣ್ಣು #ಕನಸುವಾಸ್ತವ #ಕನಸೇ #ಮನಸು #ಕನಸುಮನಸು #yqjogi_kannada #mylines

d.p cherie

ಮನಮುಟ್ಟುವ ನೆನಪುಗಳು!! #dpcherie #ಮನಸು #ಮನಸಿನ_ಮಾತು #ನೆನಪು #ನೆನಪಿನಾಳ #ನೆಪ #yqkannadaquotes

read more
ಕಿತ್ತೊಗೆದ ನೆನಪುಗಳು, ಕೆಲವೊಮ್ಮೆ,,
ಹೇಳಕೇಳದೆ ಮನ ಮುಟ್ಟುವವು!

ಎಲ್ಲಿಲ್ಲದ ಹರುಷವೋ!! ದುಃಖವೋ!!
ಮತ್ತೊಮ್ಮೆ ಕಿತ್ತೊಗೆಯಲು, ಮನಸೇ ಬಾರದು!!!
 ಮನಮುಟ್ಟುವ ನೆನಪುಗಳು!!
#dpcherie #ಮನಸು #ಮನಸಿನ_ಮಾತು #ನೆನಪು #ನೆನಪಿನಾಳ #ನೆಪ #yqkannadaquotes

d.p cherie

ಆಂತರ್ಯಶೋಧ!! #dpcherie #ಅಂತರ್ಯ #ಮನಶುದ್ಧಿ #ಮನಸು #insearchofmyself #Myself #selfrespect #selffeelings

read more
ನೀ ನಿನ್ನ ತನವನ್ನು
ಪರರ ಕೈಲಿಟ್ಟು,,
ಏನನ್ನು ಹುಡುಕುತಿರುವೆ ಮಂಕೆ!!!
ನೀ ನಿನ್ನಲಿ ಅಡಗಿಹ,
ನಿನ್ನನ್ನೇ ಪರಿಶೋಧಿಸು,,
ಪರರ ಚಿಂತೆ ನಿನಗೇಕೆ???

ಆಂತರ್ಯಶೋಧ...! ಆಂತರ್ಯಶೋಧ!!
#dpcherie #ಅಂತರ್ಯ #ಮನಶುದ್ಧಿ #ಮನಸು #insearchofmyself #myself #selfrespect #selffeelings

d.p cherie

ಪ್ರಳಯವಾಗಬಹುದು...! #dpcherie #ಪ್ರಳಯ #ಕಣ್ಣೀರು #ಮನಸು #ನಾನುನನ್ನಬರಹ #ಕನ್ನಡತಿ #youngwriter #yqjogi_kannada

read more
ಮನದಲ್ಲಿ ಸಿಡಿಲಬ್ಬರ ಹೆಚ್ಚಿದ್ದರೂ!
ಮಳೆಗರೆವ ಮುನ್ಸೂಚನೆ ಸಿಗದಾಗಿದೆ...

ಪ್ರಳಯವಾಗುವ ಪ್ರಚೋದನೆ ಇರಬೇಕು!!! ಪ್ರಳಯವಾಗಬಹುದು...!
#dpcherie #ಪ್ರಳಯ #ಕಣ್ಣೀರು #ಮನಸು #ನಾನುನನ್ನಬರಹ #ಕನ್ನಡತಿ #youngwriter #yqjogi_kannada

d.p cherie

ಮನಸು.. #dpcherie #ಮನಸು #ಹೊಲ #yqjogi_kannada #yqkannadaquotes #mylines #manasinamathu #400thquote

read more
ಮನವೆಂಬ ಹೊಲದಲ್ಲಿ,
ಆಲೋಚನೆಗಳ ಬೆಳೆ ಬೆಳೆಯಲಿ,,
ಅತಿಶಯದ ಅವಲೋಕನ ಕಳೆಯಾಗಲಿ...
ಇನ್ನುಳಿದ ಭಾವಗಳು, ಒಳಿತಿನ ಫಲ ನೀಡಲಿ... ಮನಸು..
#dpcherie #ಮನಸು #ಹೊಲ #yqjogi_kannada #yqkannadaquotes #mylines #manasinamathu #400thquote
loader
Home
Explore
Events
Notification
Profile