ಕೆಲವೊಂದಿಷ್ಟನ್ನು ವ್ಯಾಕ್ಯಾನಿಸಲಾಗದು ಸುಮ್ಮನೆ ಕಣ್ಣು ಮುಚ್ಚಿ ಆಸ್ವಾದಿಸಬೇಕಷ್ಟೇ..,ಅದು ಮಾತು,ಬರಹ ಯಾವುದಕ್ಕೂ ನಿಲುಕುವುದಿಲ್ಲಾ ಅಳತೆಮೀರಿದ ಭಾವಗಳ ಗೊಂಚಲುಗಳೇ ಅಲ್ಲಿ ಇರುತ್ತಾವೆ.ಅಂತಹುದೇ ಒಂದು ಜೀವ,ಭಾವ ಈ "ಕನ್ನಡ".
ಎಲ್ಲಿಂದಲೋ ಓಡಿ ಬಂದು ಸುಮ್ಮನೆ ಆಮ್ಮನ ಮಡಿಲ ಅಪ್ಪಿದಂತೆ,ಕಾನನದ ನಡುವೆ ಅದರ ನೀರವ ಮೌನದ ಮಾತಿಗೆ ಕಣ್ಣು ಮುಚ್ಚಿ ನಿಂತಂತೆ,ಕಡಲ ತಡದಲಿ ನಿಂತು ಅಲೆಗಳ ಮಾತಿಗೆ ಕಿವಿಯಾದಂತೆ,ಇಷ್ಟ ದೈವದ ಸಾನಿಧ್ಯದಿ ಕೈಮುಗಿದು ಆರಾಧಿಸಿದಂತೆ..,ಮನಸ್ಸು.ಹೃದಯ ತುಂಬಿ ಬರುವ ಇಂತಹ ಭಾವಕ್ಕೆಲ್ಲಾ ಹೆಸರೇನುಂಟು.....?????
ಊಹ್ಮೂಂ ಹೇಳಲಾಗದು ಮಧುರಾನುಭೂತಿಯದು ಸುಮ್ಮನೆ ಅನುಭಿಸಬೇಕು. ಥೇಟ್ ಇಂತಹುದ್ದೇ ನೋಡಿ #yqjogi_kannada#ಮೌನದಸ್ನೇಹಾ
ಈಗೀಗ ಪೊನ್ ಕಾಲ್ ಇರಲಿ,ಮೆಸೇಜ್ ಇರಲಿ,ಅಥವಾ ಎದುರು ಸಿಕ್ಕಾಗಲೇ ಇರಲಿ ಕುಶಲೋಪರಿಯ ನಂತರ ಕಾಂತಾರ ನೋಡಿದ್ಯಾ ನೀನು ಅನ್ನುವುದು ಕಾಮನ್ ಡೈಲಾಗ್ ಆಗಿದೆ.. ಅದು ನಮ್ಮಲ್ಲಿ ಎಷ್ಟರ್ ಮಟ್ಟಿಗೆ ಕ್ಯೂರಾಸಿಟಿ ಹುಟ್ಟು ಹಾಕಿದೆ ಎಂದರೆ ಫಿಲ್ಮ್ ಎಂದರೆ ಆಗದ ಅಮ್ಮನು ಕೂಡ ಕಾಂತಾರ ನೋಡಿ ಬರುವನಾ ಎನ್ನುವುದರ ಜೊತೆಗೆ,ಮೊದಲ ಸಲ ನಾನಾಗೀಯೇ ಫಿಲ್ಮ್ ಗೆ ಹೋಗಬೇಕು ಎನ್ನುವ ನನ್ನ ಬಲವಾದ ಆಲೋಚನೆವರಿಗೆ ವ್ಯಾಪಿಸಿಬಿಟ್ಟಿದೆ.
ನನಗೆ ಈ ಸಿನಿಮಾ ಗೀಳು ಮೊದಲಿಂದಲೂ ಕಡಿಮೆ ನೋಡುವುದೇ ಇಲ್ಲವೆಂದಲ್ಲಾ ತೀರಾ ಬೇಸರವೆನಿಸಿದಾಗ ಟಿವಿಯಲ್ಲೊ ಮೊಬೈಲ್ ಅಲ್ಲಿಯೋ ನೋಡಿ ಅಭ್ಯಾಸ,ಥಿಯೇಟರ್ ಮೆಟ್ಟಿಲು ತುಳಿದಿದ್ದು ಒಂದು ನಾಲ್ಕರಿಂದ ಐದು ಬಾರಿ ಅಷ್ಟ #kannadaquotes#yqjogi_kannada#ಮೌನದಸ್ನೇಹಾ