Find the Best sanakannadawrittings Shayari, Status, Quotes from top creators only on Gokahani App. Also find trending photos & videos abouti love you sana, weather is the norm in san francisco, what is the meaning of san, sanskrit to hindi dictionary, sana khan and vishal saxena,
Sahana~
ಈ ಸಂಜೆಗಳ ರಂಗು ಹೀಗೆಯೇ! ಇನಿಯನ ತುಂಟ ಮಾತಿಗೆ ನಾಚಿ ಕೆಂಪೇರುತ್ತಿದ್ದ ಅವಳ ಕೆನ್ನೆಯಂತೆ. ಈ ಸಂಜೆಗಳ ರಂಗು ಹೀಗೆಯೇ! ಏಳು ಹೆಜ್ಜೆಯ ತುಳಿದು, ನಿನ್ನವ ನಾನೆಂದು ಅವಳ್ಹಣೆಗೆ ಅವನಿರಿಸಿದ ಕುಂಕುಮದಂತೆ. ನನ್ನವನು ಮತ್ತು ಸಂಜೆಗಳು!😍 Let your feelings flow through this background given by Cascade Writers Must use hashtag- #cascadewriters Specific hashtag- #CWplainBG1389
ನನ್ನವನು ಮತ್ತು ಸಂಜೆಗಳು!😍 Let your feelings flow through this background given by Cascade Writers Must use hashtag- #cascadewriters Specific hashtag- #CWplainBG1389
read moreSahana~
ಸಂಜೆಗಳ ಮಡಿಲಲಿ, ಸಂಗಮದ ಬಯಕೆಯಲಿ, ಸವೆಸಿದ ಕ್ಷಣಗಳೆಷ್ಟೋ..! ನೀ ಸುಳಿಯಲೇ ಇಲ್ಲ, ಕಾತರಿಸುತ್ತಿದ್ದ ಕಂಗಳ ಹಾದಿಯಲಿ.— % & Pic : just clicked it, wanted to share. Ignore those lines lol:) #sanakannadawrittings #yqjogi_kannada #yqjogi #sanaclicks
Pic : just clicked it, wanted to share. Ignore those lines lol:) #sanakannadawrittings #yqjogi_kannada #yqjogi #sanaclicks
read moreSahana~
ಹೊಳೆಯುವ ಕಂಗಳು ಒಲವಿನ ಆಗರ, ಸುಗುಣ, ಸುನಡತೆಯ ಸಾಗರ! ಅವಳೊಂದಿಗೆ ಕಳೆಯುವ ಕ್ಷಣಗಳು ಮಧುರ, ಅವಳು ಜೊತೆಗಿದ್ದರೆ ಬದುಕೇ ಸುಂದರ! ಅವಳ ಸ್ನೇಹ ಸಂಪಿಗೆಯ ಕಂಪು, ಅವಳ ಒಡನಾಟ ಬೆಳದಿಂಗಳಿನ ತಂಪು! ಸವಿಯಾದ ನುಡಿ ಸಂಗೀತದಂತೆ ಇಂಪು, ಒಮ್ಮೆ ತಲೆಗೇರಿದರೆ ಬಿಡದು ಅವಳ ಪ್ರೀತಿಯ ಜೊಂಪು! ದೇವಲೋಕದಿಂದ ಇಳಿದಳೇನೋ ಚೆಲುವೆ, ಮಂದಸ್ಮಿತೆ ಅವಳು, ನಗುವೇ ಅವಳೊಡವೆ! ಮನಗಳ ನಡುವೆ ಸ್ನೇಹ ಬೆಸೆಯುವ ಸೇತುವೆ , ಇಂತಹ ಸೃಷ್ಟಿ ಜಗದಿ ಅಪರೂಪವೆ! ಮಮತಾಮಯಿ, ವಾತ್ಸಲ್ಯ ತುಂಬಿದ ದೇವತೆ, ನೀ, ತುಂತುರಲ್ಲಿ ಮಿಂದ ಹೃದಯ ಸಂತಸದಿ ಹಾಡುವ ಕವಿತೆ! This beautiful bg reminded me of you only. Sumana heroine this is for you. 😜❤️❤️ Bear with this quick one tho 😁 Bg credit- Rest Zone
This beautiful bg reminded me of you only. Sumana heroine this is for you. 😜❤️❤️ Bear with this quick one tho 😁 Bg credit- Rest Zone
read moreSahana~
ಹೊರಗೆ ಹುಸಿ ನಗೆ ಬೀರುತ್ತಾ, ಒಳಗೆ ಅಳುತ್ತಿರುವ ಹೃದಯಕ್ಕೆ ಸಾಂತ್ವನ ನೀಡುತ್ತಾ, ಜೀವನದ ಪ್ರತಿ ಹಂತವನ್ನೊಮ್ಮೆ ನೆನೆದು, ದಿಗಂತದೆಡೆಗೆ ನೋಡುತ್ತ ನಿಟ್ಟುಸಿರು ಬಿಡುವಾಗ ಕಣ್ಣಿಂದ ಜಾರುವ ಭಾರವಾದ ಹನಿಗಳೇ, ಜೀವನ. 😊🌻 #lifeiswhatitis #yqjogikannada #yqjogi #sanakannadawrittings
😊🌻 #lifeiswhatitis #yqjogikannada #yqjogi #sanakannadawrittings
read moreSahana~
ನಿನ್ನ ಪಾದದ ಮೇಲೆ ಕಾಲಿಟ್ಟೆ , ನಾ ನಡೆಯಲು ಕಲಿತದ್ದು. ನೀ ಹೆಗಲ ಮೇಲೆ ಕೂರಿಸಿಕೊಂಡಾಗಲೆ, ನಾ ಜಗವ ಕಂಡಿದ್ದು. ನಿನ್ನ ಬೆರಳ ಹಿಡಿದು ನಡೆವಾಗ, ಹೆಜ್ಜೆಗಳು ಬಲಗೊಂಡಿದ್ದು. ನಿನ್ನ ಪ್ರೀತಿಯ ಅಪ್ಪುಗೆಯಲ್ಲಿ ನಾ ಒಲವ ಕಂಡಿದ್ದು. ಬೆನ್ನ ಹಿಂದೆ ನೀನಿರಲು ಭಯ ದೂರವಾಗಿದ್ದು. ತಲೆಯ ಮೇಲೆ ಕೈಯನಿಡಲು, ಜಗತ್ತೇ ನನ್ನದು ಅನಿಸಿದ್ದು. ಹೆತ್ತವಳು ಅಮ್ಮನಾದರು, ನೀನಲ್ಲವೇ ಪೊರೆದವನು. ಕಣ್ಣ ಹನಿ ಜಾರಲು ಬಿಡದವನು, ಪ್ರೀತಿಯ ಮಳೆ ಸುರಿದವನು. Happy father's day to all fathers out there. I'm truly blessed to have you dad.❤️❤️ Pc- pinterest #yqjogi #ಅಪ್ಪನಪ್ರೀತಿ #fathersday #sanakannadawrittings
Happy father's day to all fathers out there. I'm truly blessed to have you dad.❤️❤️ Pc- pinterest #yqjogi #ಅಪ್ಪನಪ್ರೀತಿ #FathersDay #sanakannadawrittings
read moreSahana~
ಅವನೆಂದರೆ, ಕಾಣದೂರಿನ ಒಲವವನು, ಕಲ್ಪನೆಯ ನನ್ನವನು. ಹೊಳೆವ ಚಂದ್ರನ ಮೊಗದವನು,ಚಿಗುರು ಮೀಸೆಯ ಅಂಚಲಿ ನಗುವವನು. ಹೃದಯದ ಬಾಗಿಲ ಬಡಿದವನು, ಕೇಳದೇ ಒಳ ಬಂದವನು . ಹೊಂಗನಸ ಚಾದರ ಎಳೆದವನು, ನಿದಿರೆಯ ಕದ್ದ ಕನಸವನು. ನೋವ ದೂರ ನೂಕಿ, ಮನದಿ ಉಲ್ಲಾಸ ತುಂಬಿದವನು, ಸುರಿವ ಮಳೆಯ ಹನಿ ಇವನು, ಸಡಗರದಿ ಸನಿಹ ಸೆಳೆದವನು. ಕಂಗಳ ಮಿಂಚು ಹೆಚ್ಚಿಸಿದವನೆ, ಕಲ್ಪನೆಯಲ್ಲೆ ಮುದ್ದಿಸಿದವನೆ.. ಮಾಮುಲಿಯಲ್ಲ ನೀನು ತುಸು ನಾಚೆ ಹೇಳುವೆ ನೀ ಕೋಟಿಯಲಿ ಒಬ್ಬನೇ. #yqjogi_kannada #sanakannadawrittings #ನನ್ನವನು
ಕಂಗಳ ಮಿಂಚು ಹೆಚ್ಚಿಸಿದವನೆ, ಕಲ್ಪನೆಯಲ್ಲೆ ಮುದ್ದಿಸಿದವನೆ.. ಮಾಮುಲಿಯಲ್ಲ ನೀನು ತುಸು ನಾಚೆ ಹೇಳುವೆ ನೀ ಕೋಟಿಯಲಿ ಒಬ್ಬನೇ. #yqjogi_kannada #sanakannadawrittings #ನನ್ನವನು
read moreSahana~
ತುಕ್ಕು ಹಿಡಿದ ಕಿಟಕಿಯ ಸರಳ ಸಂದಿಯಿಂದೆಲ್ಲೋ, ಸೂರ್ಯನ ಕಿರಣ ಮೈಯ ತಾಗಿ, ರಸ್ಟು ಹಿಡಿದ ಕಬ್ಬಿಣದ ಮಂಚದ ಮೇಲೆ ಮಗುವಂತೆ ಮಲಗಿದ್ದ ಅವನು,ಬೆಳಗಾಯಿತು ಎಂದು ಅರಿತು, ನಿದ್ದೆಯ ಜೊಂಪು ತಲೆಯ ಆವರಿಸಿರಲು, ದಣಿದ ಕಂಗಳು ಜಗವ ನೋಡಲು ಅನುಮತಿ ನೀಡಿದಿರಲು, ದಿನದ ಕಾಯಕವ ನೆನೆದು ; ಹಾಸಿಗೆಯಿಂದ ದೇಹವನೆಳೆದು; ಕೊರೆವ ಚಳಿಯಲಿ ನಾಲ್ಕು ಸೌದೆಯ ಸುರಿದು ಗಾಳಿಯ ಕಣ್ತಪ್ಪಿಸಿ ಕಡ್ಡಿಯ ಗೀರಿ, ಒಲೆಯ ಊದಿ; ನೀರ ಬಿಸಿಗೊಳಿಸಿ, ಸುಡುವ ಉದಕದಿ ಮೈಯ ಕೊಳೆಯ ತೊಳೆದು, ಶರಟು ಪ್ಯಾಂಟಿನೊಳಗೆ ದೇಹವ ತುರುಕಿ, ಕಂಕುಳಲ್ಲಿ ಒಂದು ಬ್ಯಾಗಿರಿಸಿ, ಅಲ್ಲೆಲ್ಲೋ ಯಾವುದೋ ಉಪಹಾರ ಮಂದಿರದಿ ಎರಡು ದೋಸೆಯ ಮುರಿದು ಬಾಯೊಳಿರಿಸಿ, ಕೈಯ ಗಡಿಯಾರವು ತಿಳಿಸೆ ಸಮಯ ಓಡುತಿಹದೆಂದು, ತಂಬಿಗೆಯ ನೀರ ಕುಡಿದು ಗಂಟಲ ಸರಿಗೊಳಿಸಿ, ಮೇಲೆದ್ದು ಕಾಲ್ಕಿತ್ತು, ಓಡುತೋಡುತ ಜನರ ಗುಂಪಿನ ನಡುವೆ ಮರೆಯಾದ ನೋಡಿ ಮಾನವ. ದ ರಾ ಬೇಂದ್ರೆ ಯವರ ಮುಂಬೈ ಜಾತಕ ಕವನ ಸ್ಪೂರ್ತಿ #yqjogi_kannada #yqjogi #machinelife #jeevanapayana #sanakannadawrittings
ದ ರಾ ಬೇಂದ್ರೆ ಯವರ ಮುಂಬೈ ಜಾತಕ ಕವನ ಸ್ಪೂರ್ತಿ #yqjogi_kannada #yqjogi #machinelife #jeevanapayana #sanakannadawrittings
read moreSahana~
ಅಮ್ಮನ ಜೋಗುಳ ಸಂಗೀತ; ಅಪ್ಪನ ಬೈಗುಳ ಸಂಗೀತ! ಹಕ್ಕಿಯ ಚಿಲಿಪಿಲಿ ಸಂಗೀತ; ಚುಕ್ಕಿಯ ಕಲರವ ಸಂಗೀತ! ಗುನುಗದ ಪಲ್ಲವಿ ಸಂಗೀತ; ದನಿಯಾಗದ ಸಾಲು ಸಂಗೀತ! 🎵🎵🎵 #ನಾನುಮತ್ತುಸಂಗೀತ #sanakannadawrittings #yqkannada #yqjogi
🎵🎵🎵 #ನಾನುಮತ್ತುಸಂಗೀತ #sanakannadawrittings #yqkannada #yqjogi
read moreSahana~
ಸ್ವಲ್ಪವೇ ನೀರು ದಣಿವಾರಿಸಬಹುದು, ಹೆಚ್ಚಾದರೆ ಸುನಾಮಿಯಾಗಿ ಜಗತ್ತನ್ನೇ ಸರ್ವನಾಶ ಮಾಡಬಲ್ಲದು. ಒಂದು ಸಣ್ಣ ಜ್ಯೋತಿ ಕತ್ತಲೆ ತೊಲಗಿಸುವುದು, ಒಂದು ಸಣ್ಣ ಕಿಡಿ ಕಾಡನ್ನೇ ಸರ್ವನಾಶಮಾಡಿ ಜೀವಿಗಳನ್ನು ಕತ್ತಲೆಗೆ ತಳ್ಳಬಹುದು. ದ್ವಿಮುಖ #sanakannadawrittings #ನೀರುಬೆಂಕಿ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ದ್ವಿಮುಖ #sanakannadawrittings #ನೀರುಬೆಂಕಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreSahana~
ಗೆದ್ದಾಗ ಹಿಂದೆ ಇರುವವರು, ಸೋತಾಗ ಕೆಳಗೆ ತುಳಿಯುತ್ತಾರೆ, ದೇವರನ್ನೇ ಮೆಚ್ಚಲಿಲ್ಲ ಈ ಜನ, ನಿನ್ಯಾವ ಲೆಕ್ಕ, ಇಲ್ಲಿ ಯಾರನ್ನು ಮೆಚ್ಚಿಸ ಬೇಕಿಲ್ಲ, ನಿನ್ನಂತೆ ನೀನೀರು, ನಿನ್ನ ಆತ್ಮಸಾಕ್ಷಿಗೆ ನ್ಯಾಯವಾಗಿ ನಡೆ, ನಿನಗೆ ಸರಿ ಅನಿಸಿದ್ದು ಮಾಡು, ಯಾರಿಗಾಗಿ ಯು ಬದಲಾಗಬೇಕಿಲ್ಲ, ಅನ್ನುವವವರು ಅನ್ನುತ್ತಲೆ ಇರುತ್ತಾರೆ, ತಲೆ ಕೆಡಿಸಿಕೊಳ್ಳಬೇಡಿ, ನ್ಯಾಯದ ದಾರಿಯಲ್ಲಿ ನಡೆಯಿರಿ, ಎಲ್ಲ ತಿರುಗಿ ನಿಮ್ಮೆಡೆಗೆ ನೋಡುವ ದಿನ ಬರುವುದು, ನೀವಾಗಿ ಬದುಕಿ, ನಿಮಗಾಗಿ ಬದುಕಿ. ನೀವಾಗಿ ಬದುಕಿ! #sanakannadawrittings #ಲೋಕ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ನೀವಾಗಿ ಬದುಕಿ! #sanakannadawrittings #ಲೋಕ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read more